ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್
ಬೆಂಗಳೂರು, ಜು.25: ಮದ್ಯದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ತನ್ನ ವಾರ್ಷಿಕ ಶೇ.12ರ ಬೆಳವಣಿಗೆಯ ಮೂಲಕ ಈ ಹಣಕಾಸು ವರ್ಷದಲ್ಲಿ ವಿಶ್ವದ ನಂಬರ್ 1 ಮದ್ಯ ತಯಾರಿಕಾ ಕಂಪೆನಿಯಾಗಿ ಹೊರಹೊಮ್ಮಲಿದೆ ಎಂದು ತನ್ನ ಶೇರುದಾರರಿಗೆ ತಿಳಿಸಿದೆ.
ತನ್ನ ಮುಂದಿನ ಯೋಜನೆಗಳನ್ನು ಶೇರುದಾರರೊಂದಿಗೆ ಹಂಚಿಕೊಂಡ ಕಂಪೆನಿ, ಮುಂದಿನ ಮೂರು ವರ್ಷಗಳಲ್ಲಿ ಕಂಪೆನಿಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 1100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿರುವದಾಗಿ ತಿಳಿಸಿದೆ.
ಕಂಪೆನಿ 2009-10ರಲ್ಲಿ ವಾರ್ಷಿಕ ನೂರು ಮಿಲಿಯನ್ ಕೇಸ್ ಗಳಷ್ಟು ಮದ್ಯ ಮಾರಾಟ ಮಾಡಿದ್ದು ವಿಶ್ವದ ಎರಡನೇ ಅತೀ ದೊಡ್ಡ ಮದ್ಯ ಮಾರಾಟ ಕಂಪೆನಿಯಾಗಿ ಹೊರಹೊಮ್ಮಿದೆ. ಎರಡಂಕಿಗಳ ಬೆಳವಣಿಗೆಯನ್ನು ಕಾಯ್ದುಕೊಂಡರೆ ಕಂಪೆನಿ ಈ ವರ್ಷ ಮೊದಲ ಸ್ಥಾನಕ್ಕೇರಲಿದೆ.

1100 ಕೋಟಿ ರುಪಯಿ ಹೂಡಿಕೆಯ ಮೂಲಕ ಕಂಪೆನಿ ಬಾಟ್ಲಿಂಗ್ ಸಾಮರ್ಥ್ಯ ಹಾಗೂ ಮಾಲ್ಟ್ ಸ್ಪಿರಿಟ್ ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಕಂಪೆನಿ ಹೇಳಿದೆ. ಕಂಪೆನಿ ಹೊಸ ಬ್ರಾಂಡ್ ಗಳನ್ನು ಬಿಡುಗಡೆ ಮಾಡಲಿದ್ದು, ವೈಟ್ ಮತ್ತು ಮೆಕೆ ಬ್ರಾಂಡ್ ನ್ನೂ ಬಿಡುಗಡೆ ಮಾಡಲಿದೆ.
ಕಂಪೆನಿಯ ಪ್ರೀಮಿಯಂ ಬ್ರಾಂಡ್ ಗಳಲ್ಲಿ ಹೆಚ್ಚಿನ ಬದಲಾವಣೆ ತರಲೂ ಕಂಪೆನಿ ನಿರ್ಧರಿಸಿದೆ . ಕಂಪೆನಿಯ ಬ್ರಾಂಡೆಡ್ ವ್ಯಾಪಾರ ಇಂಗ್ಲೆಂಡ್ ನಲ್ಲಿ ಶೇ.45 ರಿಂದ ಶೇ.30ಕ್ಕೆ ಕುಸಿದಿದೆ. ಮುಂದಿನ ಎರಡು ವರ್ಷಗಳಲ್ಲಿ ವೈಟ್ ಅಂಡ್ ಮೆಕೆ ಸ್ಕಾಚ್ ವ್ಹಿಸ್ಕಿಯ ಮಾರಾಟವನ್ನು ವಾರ್ಷಿಕ 2,75,000 ಕೇಸ್ ಗಳಿಗೆ ಏರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಶೇ20 ಪಾಲನ್ನು ಪಡೆಯಲು ಕಂಪೆನಿ ಯೋಚಿಸಿದೆ.
ಕಂಪೆನಿ ಕಳೆದ ಹಣಕಾಸು ವರ್ಷದಲ್ಲಿ ವೈಟ್ ಅಂಡ್ ಮಕೆಯ 1.5 ಲಕ್ಷ ಕೇಸ್ ವಿಸ್ಕಿಯನ್ನು ಮಾರಾಟ ಮಾಡಿದೆ. ಕಂಪೆನಿಯ ಮಾರಾಟ ಮಳಿಗೆಗಳನ್ನು ಈಗಿನ 15,000 ದಿಂದ 25,000ಕ್ಕೇರಿಸಲೂ ಕಂಪೆನಿ ನಿರ್ಧರಿಸಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications