ಭಾರಿ ಬೆಂಬಲದೊಂದಿಗೆ ಕೈ ಪಾದಯಾತ್ರೆ ಶುರು

ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಡಿಕೆಶಿವಕುಮಾರ, ವಿ ಎಸ್ ಉಗ್ರಪ್ಪ, ಆರ್ ವಿ ದೇಶಪಾಂಡೆ, ಎಚ್ ಕೆ ಪಾಟೀಲ್, ಪರಿಷತ್ ನಾಯಕಿ ಮೋಟಮ್ಮ ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಸಾವಿರಾರು ಸಂಖ್ಯೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕರ್ತರು ಬಿಜೆಪಿ ಸರಕಾರ ಹಾಗೂ ರೆಡ್ಡಿಗಳ ವಿರುದ್ಧ ಕೂಗುತ್ತಿರುವ ಘೋಷಣೆ ಮುಗಿಲು ಮುಟ್ಟಿದೆ.
ಪಾದಯಾತ್ರೆಯಿಂದ ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದೆ. ರಾಜ್ಯದ ವಿವಿಧ ಕಡೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿದ್ದರಿಂದ ಬೆಂಗಳೂರಿಗರ ನಿತ್ಯ ಜೀವನ ಫಜೀತಿಯಾಗಿದೆ. ಕಾಂಗ್ರೆಸ್ ನೇತೃತ್ವದ ಪಾದಯಾತ್ರೆಯಿಂದ ಜೆಡಿಎಸ್ ಹಿಂದೆ ಸರಿದಿದ್ದು, ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಜಿಕೆ ಗೋವಿಂದರಾವ್, ಬಂಜಗೆರೆ ಜಯಪ್ರಕಾಶ್ ಮತ್ತಿತತರ ಸಾಹಿತಿಗಳು ಪಾದಯಾತ್ರೆಗೆ ಶುಭಹಾರೈಸಿ ಬೀಳ್ಕೂಟ್ಟಿದ್ದು ವಿಶೇಷವಾಗಿತ್ತು.
ಪಾದಾಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಬೊಕ್ಕಸಕ್ಕೆ 5,000 ಕೋಟಿ ರುಪಾಯಿ ನಷ್ಟವಾಗಿದೆ. ಇಂತಹ ದೊಡ್ಡ ಮಟ್ಟದ ಹಗರಣವನ್ನು ಸಿಬಿಐ ತನಿಕೆಗೆ ವಹಿಸಲು ಸರಕಾರ ಸಿದ್ದವಿಲ್ಲ. ಸರಕಾರದಲ್ಲಿರುವ ಸಚಿವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಿಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಸಿಬಿಐ ತನಿಖೆ ವಹಿಸುವವರೆಗೂ ಪಾದಯಾತ್ರೆ ಕೈಬಿಡಲು ಸಾಧ್ಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications