ಗೋಹತ್ಯೆ ಮಸೂದೆಯನ್ನು ಕಸದ ಬುಟ್ಟಿಗೆ ಹಾಕಿ
ಬೆಂಗಳೂರು,
ಜು. 23 : ಗೋಹತ್ಯೆ ಮಸೂದೆಗೆ ಅಂಕಿತ ಹಾಕದೆ ಹಿಂದಕ್ಕೂ ಕಳುಹಿಸದೇ ಕಸದಬುಟ್ಟಿಗೆ ಹಾಕಿ. ಅದಕ್ಕೆ ಅದೇ ಸ್ಥಳ ಸೂಕ್ತ ಎಂದು ಅಹಿಂದ ಹಿರಿಯ ಮುಖಂಡ ಎಕೆ ಸುಬ್ಬಯ್ಯ, ಪ್ರೊ. ಎನ್ ವಿ ನರಸಿಂಹಯ್ಯ ಅವರನ್ನು ಒಳಗೊಂಡ ಕರ್ನಾಟಕ ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ-2010 ವಿರೋಧಿ ಆಂದೋಲನ ಸಮಿತಿ ರಾಜ್ಯಪಾಲರನ್ನು ಒತ್ತಾಯಿಸಿದೆ. id="toptextpromo">ಉಭಯ
ಸದನಗಳಲ್ಲಿ ಚರ್ಚೆಯಾಗದೆ ಅಂಗೀಕೃತವಾದ ಎಲ್ಲ 19 ಮಸೂದೆಗಳನ್ನು ಕಸದ ಬುಟ್ಟಿಗೆ ಹಾಕಿ. ಇಂತಹ ಮಸೂದೆಗಳನ್ನು ಅಸಿಂಧುಗೊಳಿಸುವ ಅಧಿಕಾರ ರಾಜ್ಯಪಾಲರಿಗಿದೆ. ಹಾಗೆ ಮಾಡಿ ರಾಜ್ಯಾಂಗ ರಕ್ಷಿಸುತ್ತಾರೆಂಬ ವಿಶ್ವಾಸವೂ ಇದೆ. ಹಾಗಾಗಿ, ಗೋಹತ್ಯೆ ನಿಷೇಧ ಸೇರಿದಂತೆ ಯಾವ ಮಸೂದೆಗೂ ಆಂಕಿತ ಹಾಕಬೇಡಿ. ಹಾಗಂತ ಹಿಂದಕ್ಕೂ ಕಳುಹಿಸುವುದೂ ಬೇಡ. ಎಲ್ಲವನ್ನೂ ಕಸದ ತೊಟ್ಟಿಗೆ ೆಸೆದು ಅದರ ಮೌಲ್ಯ ಏನು ಮತ್ತು ಎಷ್ಟು ಎಂಬುದನ್ನು ಜಗತ್ತಿಗೆ ತೋರಿಸಿಕೊಡಿ ಎಂದು ಅವರು ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಾಣಿ
ದಯಾ ಸಂಘದವರು ಪ್ರಾಣಿಗಳ ಮೂಲಕ ತಮ್ಮ ಜೀವನೋಪಾಯ ಮಾಡಿಕೊಂಡಿದ್ದಾರೆಯೇ ಹೊರತು ಅವರು ದನ ಸಾಕುವವರಲ್ಲ. ಅವರೊಂದಿಗೆ ಅಭಿಯಾನದಲ್ಲಿ ಕೈಜೋಡಿಸಿದವರಿಗೂ ದನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಇದು ಕೇವಲ ಸರಕಾರಿ ಪ್ರಾಯೋಜಿತ ಅಭಿಯಾನ ಎಂದು ಸುಬ್ಬಯ್ಯ ಟೀಕಿಸಿದರು.











Click it and Unblock the Notifications