ತಪ್ಪೆ ಮಾಡದಿದ್ದರೆ ಲೋಕಾಯುಕ್ತ ತನಿಖೆ ಏಕೆ ?
ಹುಬ್ಬಳ್ಳಿ,
ಜು. 20 : ಗಣಿಧಣಿಗಳು ತಪ್ಪು ಮಾಡಿಲ್ಲ ಎಂದು ಖುದ್ದು ಮುಖ್ಯಮಂತ್ರಿಯೇ ಹೇಳುವುದಾದರೇ ಪ್ರಕರಣವನ್ನು ಲೋಕಾಯುಕ್ತ ಇಲಾಖೆಗೆ ವಹಿಸುವುದಾದರೂ ಏಕೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶ್ನಿಸಿದ್ದಾರೆ. id="toptextpromo">ಹಿರಿಯ
ಪತ್ರಕರ್ತ ಪಾಟೀಲ್ ಪುಟ್ಟಪ್ಪ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ, ಲೋಕಾಯುಕ್ತ ತನಿಖೆಗೆ ವಹಿಸುತ್ತೇವೆ ಎನ್ನುವುದು ಸರಕಾರದ ನಿಲುವು. ಅದನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ, ತನಿಖೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ರೆಡ್ಡಿಗಳು ತಪ್ಪೇ ಮಾಡಿಲ್ಲ ಎಂದು ಹೇಳುವುದು ಎಷ್ಟು ಸೂಕ್ತ ಎಂದು ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ತಪ್ಪು
ಮಾಡಿಲ್ಲ ಎಂದು ಹೇಳಿಕೆ ಮುಖ್ಯಮಂತ್ರಿಯವರಿಂದ ಬರಬಾರದಿತ್ತು. ಅದಿರು ಸಾಗಾಟದಲ್ಲಿ ಬಲಶಾಲಿಗಳ ಕೈವಾಡವಿದೆ ಎಂದು ಸಂತೋಷ ಹೆಗ್ಡೆ ಹೇಳಿದರು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ಹಗರಣವನ್ನು ಲೋಕಾಯುಕ್ತ ತನಿಖೆಗೆ ಸರಕಾರ ಸೋಮವಾರ ವಹಿಸಿದೆ.











Click it and Unblock the Notifications