ರಾಹುಲ್ ಗಾಂಧಿ ಪರಮಾಪ್ತ ನಾಪತ್ತೆ
ಲಖನೌ,
ಜು.20 : ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಪರಮಾಪ್ತ ಹಾಗೂ ಗುಜರಾತ್ ಯುವ ಕಾಂಗ್ರೆಸ್ ಮುಂಚೂಣಿ ನಾಯಕ ನಿಶಾಂತ್ ಪಟೇಲ್ ಇಲ್ಲಿನ ಹಾರ್ದಯಿ ನಗರದಲ್ಲಿನ ಹೋಟೆಲ್ ವೊಂದರಿಂದ ಸೋಮವಾರ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಿಶಾಂತ್ ನಾಪತ್ತೆ ಪ್ರಕರಣ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. id="toptextpromo">ಗುಜರಾತ್
ನ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಹಸ್ಮುಖ್ ಪಟೇಲ್ ಅವರ ಮಗನಾಗಿರುವ ನಿಶಾಂತ್ ಪಟೇಲ್, ಗುಜರಾತ್ ಯುವ ಕಾಂಗ್ರೆಸ್ಸಿನ ಜನಪ್ರಿಯ ಯುವ ನಾಯಕ. ರಾಹುಲ್ ಗಾಂಧಿ ಅವರ ನಿಕಟವರ್ತಿಯಾಗಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ಬಹುಬೇಗನೆ ಪ್ರವರ್ಧಮಾನಕ್ಕೆ ಬಂದಿರುವ ನಾಯಕರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಾರ್ದಯಿ
ನಗರದ ಕೊಟ್ವಾಲಿ ಪ್ರದೇಶದಲ್ಲಿರುವ ಉತ್ಸವ ಹೋಟೆಲ್ ನಲ್ಲಿ ನಿಶಾಂತ್ ತಂಗಿದ್ದರು. ಸೋಮವಾರ ರಾತ್ರಿ ಭೋಜನದಲ್ಲಿ ಎಲ್ಲರೊಂದಿಗೆ ಬೆರತು ಆಹಾರ ಸೇವಿಸಿದ್ದಾರೆ. ಆದರೆ, ಮಂಗಳವಾರ ಬೆಳಗ್ಗೆ ಅವರ ರೂಂನಲ್ಲಿ ಇಲ್ಲ ಎನ್ನುವುದು ತಿಳಿಯಿತು. ಕೂಡಲೇ ಅವರ ತಂಗಿದ್ದ ರೂಂನ ಬೀಗವನ್ನು ಒಡೆದು ಅವರಿಗೆ ಸೇರಿದ್ದ ವಸ್ತುಗಳ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಶಾಂತ್ ಕಾಣಿಯಾಗಲು ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಕಾರ್ಯಾಚರಣೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications