ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ನಂತರ ಐಸಿಐಸಿಐ ಬ್ಯಾಂಕ್ ಬಡ್ಡಿ ದರ ಏರಿಕೆ

By Mahesh
|
Google Oneindia Kannada News

ICICI Bank CEO Chanda Kochchar
ಮುಂಬೈ, ಜು.19: ದೇಶದ ಅತೀ ದೊಡ್ಡ ಖಾಸಗೀ ಬ್ಯಾಂಕ್ ಅಗಿರುವ ಐಸಿಐಸಿಐ ಬ್ಯಾಂಕ್ ಮುಂದಿನ ಸೆಪ್ಟೆಂಬರ್ ನಂತರ ತನ್ನ ಬಡ್ಡಿ ದರಗಳನ್ನು ಏರಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚ್ಚಾರ್ ಇಂದು ತಿಳಿಸಿದರು.

ನವದೆಹಲಿಯಲ್ಲಿ ಸಿಐಐ ಏರ್ಪಡಿಸಿದ್ದ ಸಮಾರಂಬವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಈ ಹಣಕಾಸು ವರ್ಷದ ದ್ವಿತೀಯಾರ್ದದಲ್ಲಿ ಹಣದ ಲಭ್ಯತೆಯ ಅವಶ್ಯಕತೆ ಹೆಚ್ಚಲಿರುವದಾಗಿ ಹೇಳಿದರು. ಇದರಿಂದ ಸಹಜವಾಗೇ ಬಡ್ಡಿ ದರ ಹಾಗೂ ಸಾಲದ ಬಡ್ಡಿ ದರ ಏರಲಿರುವುದಾಗಿ ಅವರು ಅಭಿಪ್ರಾಯಪಟ್ಟರು.

ಈ ಹಣಕಾಸು ವರ್ಷದಲ್ಲಿ ಬ್ಯಾಂಕಿನ ಅಂಗ ಸಂಸ್ಥೆ ಐಸಿಐಸಿಐ ಸೆಕ್ಯುರೀಟೀಸ್ ಷೇರು ಮಾರುಕಟ್ಟೆಗೆ ಪ್ರವೇಶಿಸುವುದಿಲ್ಲ ಎಂದ ಅವರು ಬ್ಯಾಂಕ್ ಸಾಕಷ್ಟು ಹಣದ ಲಭ್ಯತೆ ಹೊಂದಿರುವುದಾಗಿ ಹೇಳಿದರು.

ಈ ಹಣಕಾಸು ವರ್ಷದ ದ್ವಿತೀಯಾರ್ದದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿದ್ದು ಸಾಲ ಮಾರುಕಟ್ಟೆಯೂ ಹೆಚ್ಚಿನ ಬೆಳವಣಿಗೆ ದಾಖಲಿಸಲಿರುವುದಾಗಿ ಅವರು ಹೇಳಿದರು.

ಬರೇ ಆಹಾರ ಅಲ್ಲದೆ ಎಲ್ಲಾ ರಂಗಗಳಲ್ಲೂ ಹಣದುಬ್ಬರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಪೂರೈಕೆ ಹೆಚ್ಚಿಸಿದಲ್ಲಿ ಹಣದುಬ್ಬರ ನಿಧಾನವಾಗಿ ಇಳಿಕೆಯಾಗಲಿದೆ ಎಂದರು . ಮುಂದಿನ ಜುಲೈ ೨೭ ರಂದು ನಡೆಯಲಿರುವ ರಿಸರ್ವ್ ಬ್ಯಾಮಕಿನ ತ್ರೈಮಾಸಿಕ ಹಣಕಾಸು ಪರಾಮರ್ಶೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದೇಶದ ಆರ್ಥಿಕ ಪ್ರಗತಿಯ ಗುರಿಯನ್ನು ಶೇ ೯ ಕ್ಕೆ ಇಟ್ಟುಕೊಂಡು ಹಣದುಬ್ಬರವನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಿದೆ ಎಂದರು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X