ರೆಡ್ಡಿಗಳ ಬಂಡವಾಳ ಬಹಿರಂಗ ಮಾಡುವೆ : ಕುಮಾರಸ್ವಾಮಿ
ಬೆಂಗಳೂರು,
ಜು. 19 : ಜನಾರ್ದನರೆಡ್ಡಿ ಕಾಂಗ್ರೆಸ್ಸಿಗರ ಮೇಲೆ ಗಣಿ ಬಾಂಬ್ ಎಸೆದ ನಂತರ ರೆಡ್ಡಿಗಳ ಬಂಡವಾಳ ಬಯಲಿಗೆಳೆಯಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಸಂಜೆ 5 ಗಂಟೆಗೆ ಬಳ್ಳಾರಿಯಲ್ಲಿ ರೆಡ್ಡಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಮಹತ್ವದ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. id="toptextpromo">ಅಕ್ರಮ
ಗಣಿಗಾರಿಕೆಗೆ ಸಂಬಂಧಿಸಿದಂತೆ ಜನಾರ್ದನರೆಡ್ಡಿ ನಡೆಸಿದ ಪತ್ರಿಕಾಗೋಷ್ಠಿ ಮುಗಿದ ನಂತರ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿದ ಕುಮಾರಸ್ವಾಮಿ, ರೆಡ್ಡಿಗಳ ವಿರುದ್ಧ ಹೋರಾಟ ನಡೆಸುವ ತಂತ್ರದ ಬಗ್ಗೆ ಚರ್ಚೆ ನಡೆಸಿದರು. ಇದೇ 25 ರಿಂದ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಬಳ್ಳಾರಿ ಬಚಾವೋ ಆಂದೋಲನವನ್ನು ಬೆಂಬಲಿಸಲು ಜೆಡಿಎಸ್ ಹಿಂದೇಟು ಹಾಕಿದ್ದು, ಕರ್ನಾಟಕ ಬಚಾವೋ ಆಂದೋಲನ ನಡೆಸುವುದಾಗಿ ಅವರು ಘೋಷಿಸಿದರು. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿಯಲ್ಲಿ
ರೆಡ್ಡಿಗಳು ಯಾವ ರೀತಿಯಲ್ಲಿ ಅಕ್ರಮ ಗಣಿಗಾರಿಕೆ ಹೇಗೆ ನಡೆಸುತ್ತಿದ್ದಾರೆ ಎಂದು ದಾಖಲೆ ಸಮೇತವಾಗಿ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ಕರೆದು, ಮಹತ್ವದ ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.











Click it and Unblock the Notifications