ಹಿಂದೂಗಳಿಗೆ ಅವಮಾನ : ಸೋನಿಯಾಗೆ ಸಮನ್ಸ್
ಮುಜಫರ್
ಪುರ್, ಜು. 18 : ಸೋನಿಯಾ ಗಾಂಧಿ ಅವರನ್ನು ದುರ್ಗಾಮಾತೆಯಂತೆ ಚಿತ್ರಿಸಲಾಗಿರುವ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಅವರಿಗೆ ಬಿಹಾರದ ನ್ಯಾಯಾಲಯ ಜುಲೈ 29ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. id="toptextpromo">ಮುಝಫರ್
ಪುರ್ ದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್ ಕೆ ಶ್ರೀವಾಸ್ತವ ಅವರು, ಸೋನಿಯಾ ಗಾಂಧಿ ಮತ್ತು ರೀತಾ ಬಹುಗುಣ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಇದೇ 29ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಿದೆ. 2007ರಲ್ಲಿ ಸೋನಿಯಾ ಗಾಂಧಿ ಅವರನ್ನು ದುರ್ಗಾಮಾತೆಗೆ ಹೋಲಿಸಿ ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಹಾಕಲಾಗಿದ್ದ ಚಿತ್ರಗಳಿಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಉತ್ತರ
ಪ್ರದೇಶ ಕಾಂಗ್ರೆಸ್ ಮಾಡಿರುವ ಈ ಕೃತ್ಯ ಹಿಂದೂಗಳಿಗೆ ಮಾಡಿರುವ ಅವಮಾನ. ಪೋಸ್ಟರ್ ಗಳಲ್ಲಿ ಸೋನಿಯಾ ಗಾಂಧಿ ಅವರನ್ನು ದುರ್ಗಾಮಾತೆಯನ್ನಾಗಿ ಚಿತ್ರಿಸಿರುವುದು ಕುಚ್ಯೋದ್ಯದ ಕೆಲಸ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಹಿಂದೂಗಳ ಆರಾಧಿಸುವ ದೇವತೆಯನ್ನು ಪೋಸ್ಟರ್ ಗಳಲ್ಲಿ ಬಳಸಿಕೊಳ್ಳುವುದು ಖಂಡನೀಯ ಎಂದು ಬಿಹಾರದ ಹಿರಿಯ ವಕೀಲ ಸುಧೀರ್ ಓಝಾ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.











Click it and Unblock the Notifications