ಕಲ್ಯಾಣ ಕೋಮುವಾದಿ : ಮುಲಾಯಂ ವಿಶ್ವಾಸದ್ರೋಹಿ
ಲಖನೌ,
ಜು. 16 : ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ನಾಯಕ ಕಲ್ಯಾಣ ಸಿಂಗ್ ಅವರನ್ನು ಕೈಹಿಡಿದಿದ್ದಕ್ಕೆ ಮುಸ್ಲಿಮರು ನನ್ನನ್ನು ಕೈಬಿಟ್ಟರು. ಹೀಗಾಗಿ ಮುಸ್ಲಿಂ ಜನಾಂಗದ ಕ್ಷಮೆಯಾಚಿಸುವೆ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಹೇಳಿದ್ದಾರೆ. ಮುಲಾಯಂಸಿಂಗ್ ಒಬ್ಬ ವಿಶ್ವಾಸದ್ರೋಹಿ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. id="toptextpromo">ಕಳೆದ
ಸಲ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ನಾನು ಕೆಲವು ತಪ್ಪು ವ್ಯಕ್ತಿಗಳ ಕೈಹಿಡಿದೆ. ಇದು ಕೆಲವು ಜಾತ್ಯಾತೀತ ಶಕ್ತಿಗಳು ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಹೋದರರಿಗೆ ಗೊಂದಲ ಉಂಟಾಯಿತು ಮತ್ತು ಅವರ ಭಾವನೆಗೆ ಧಕ್ಕೆ ಉಂಟಾಯಿತು. ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಈ ಕಾರಣಕ್ಕಾಗಿ ಮುಸ್ಲಿಮರ ಕ್ಷಮೆಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಾದವರ ಬೆಂಬಲವನ್ನು ಪಡೆಯುವುದಿಲ್ಲ ಎಂದು ಮುಲಾಯಂಸಿಂಗ್ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಲಾಯಂಸಿಂಗ್
ಮುಸ್ಲಿಮರಲ್ಲಿ ಕ್ಷಮೆ ಕೋರಿರುವಂತೆ ಅತ್ತ ಕೆಂಡಾಮಂಡಲವಾಗಿರುವ ಕಲ್ಯಾಣ್ ಸಿಂಗ್, ಮುಲಾಯಂಸಿಂಗ್ ಒಬ್ಬ ವಿಶ್ವಾಸದ್ರೋಹಿ ಎಂದು ಜರಿದಿದ್ದಾರೆ. ಜನರನ್ನು ಬಳಸಿಕೊಂಡ ಬಳಿಕ ಬೆನ್ನಿಗೆ ಚೂರಿ ಹಾಕುವುದು ಅವರ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ. ನಾನು ಮುಲಾಯಂ ಸಿಂಗ್ ಅವರ ಮನೆ ಬಾಗಿಲಿಗೆ ಹೋಗಿಯೇ ಇಲ್ಲ. ಅವರೇ ನನ್ನ ಲಖನೌ ನಿವಾಸಕ್ಕೆ ಏಳು ಬಾರಿ ಮತ್ತು ದೆಹಲಿ ನಿವಾಸಕ್ಕೆ ನಾಲ್ಕು ಬಾರಿ ಬಂದಿದ್ದರು ಎಂದು ಕಲ್ಯಾಣ್ ಸಿಂಗ್ ಹೇಳಿದ್ದಾರೆ.











Click it and Unblock the Notifications