ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರ ಚರ್ಚೆ

By Mrutyunjaya Kalmat
|
Google Oneindia Kannada News

HR Bhardwaj
ನವದೆಹಲಿ, ಜು. 15 : ಅಕ್ರಮ ಗಣಿಗಾರಿಕೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಂವಿಧಾನದ 355ನೇ ವಿಧಿ ಜಾರಿ ಬಗ್ಗೆ ಕರ್ನಾಟಕದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಬುಧವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪಿ ಚಿದಂಬರಂ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ರಾಜ್ಯಪಾಲರು ಕೇಂದ್ರ ನಾಯಕರ ಜೊತೆ ನಡೆಸಿದ ಮಾತುಕತೆಯಲ್ಲಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನ, ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ ಮತ್ತು ನಂತರ ರಾಜೀನಾಮೆ ವಾಪಸ್ ಪಡೆದ ವಿಷಯಗಳು ಚರ್ಚೆಗೆ ಬಂದವು. ಆದರೆ, ಈ ವಿವರವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲು ರಾಜ್ಯಪಾಲರು ನಿರಾಕರಿಸಿದರು.

ಸಂವಿಧಾನದ 355ನೇ ವಿಧಿ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಹೊರಗಿನ ಅಕ್ರಮಣ, ಆಂತರಿಕ ಕ್ಷೋಭೆ ಎಲ್ಲ ರಾಜ್ಯಗಳನ್ನು ರಕ್ಷಿಸುವುದು ಕೇಂದ್ರ ಸರಕಾರದ ಕರ್ತವ್ಯ ಎಂದು 355ನೇ ವಿಧಿ ಹೇಳುತ್ತದೆ ಎಂದಷ್ಟೇ ಭಾರದ್ವಾಜ್ ಹೇಳಿದರು. ಇತ್ತ ಸರಕಾರದ ವಿರುದ್ಧ ಪದೆಪದೇ ವಾಗ್ದಾಳಿ ನಡೆಸಿ ಮುಜುಗರಕ್ಕೆ ಈಡಿಮಾಡುತ್ತಿರುವ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ಭವನದ ಎದುರು ಬಿಜೆಪಿ ಧರಣಿ ನಡೆಸಲು ಮುಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X