ಬಿಜೆಪಿ ಗೂಡಿಗೆ ಕೊಳ್ಳೆ ಇಟ್ಟವರು ಯಾರು ?
ಬೆಂಗಳೂರು,
ಜು. 15 : ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲ ಭಾರದ್ವಾಜ್ ದಿಲ್ಲಿಗೆ ದೂರು ನೀಡಿದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆದಿದೆ. ಗಣಿ ಹಗರಣದಲ್ಲಿ ಸಿಎಂ ವರ್ತನೆ ಬಳ್ಳಾರಿ ಗಣಿಧಣಿಗಳನ್ನು ಕೆರಳಿಸಿದೆ ಎನ್ನಲಾಗಿದೆ. id="toptextpromo">ಜನಾರ್ದನ
ರೆಡ್ಡಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕರುಣಾಕರ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ, ನಾಗೇಂದ್ರ, ಸುರೇಶ ಬಾಬು, ನೇಮಿರಾಜ್ ನಾಯಕ್ ಪಾಲ್ಗೊಂಡಿದ್ದರು. ಇದೇ ವೇಳೆ ಯಡಿಯೂರಪ್ಪ ಅವರು ತಮ್ಮ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಕಳೆದ ಮಂಗಳವಾರ (ಜು 13) ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೆಲ ಶಾಸಕರು ಗಣಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಪ್ರಸ್ತಾಪ ಮಾಡಿರುವುದು ರೆಡ್ಡಿ ಸಹೋದರರನ್ನು ತೀವ್ರ ಚಿಂತೆಗೀಡು ಮಾಡಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಒಳ್ಳೆ ವ್ಯಕ್ತಿ, ಚೆನ್ನಾಗಿ ಕೆಲಸ ನಿರ್ವಹಿಸಲು ಆಸಕ್ತಿ ಇರುವವರು. ಆದರೆ ಅವರು ಗಣಿಧಣಿಗಳ ಹಿಡಿತದಲ್ಲಿದ್ದಾರೆ ಎನ್ನುವ ರಾಜ್ಯಪಾಲರ ಹೇಳಿಕೆಯಿಂದ ರೆಡ್ಡಿ ಸಹೋದರರು ಮತ್ತಷ್ಟು ಕೆರಳಿದ್ದಾರೆ. ತಮ್ಮ ವಿರುದ್ದ ವ್ಯವಸ್ಥಿತವಾಗಿ ಗುಂಪುಗಾರಿಕೆ ನಡೆಯುತ್ತಿದೆಯೆಂದು ಆತಂಕಗೊಂಡಿರುವ ಇವರು ಬುಧವಾರ (ಜು 14) ರಾತ್ರಿ ಸಭೆ ಸೇರಿ ಮುಂದಿನ ಕಾರ್ಯತಂತ್ರ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.











Click it and Unblock the Notifications