ಸ್ಪೇನ್ ಶಿಸ್ತಿಗೆ ತಲೆಬಾಗಿದ ಫೀಫಾ ವಿಶ್ವಕಪ್

ಈ ವಿಶ್ವಕಪ್ ನಲ್ಲಿ ಒಂದೂ ಸೋಲನ್ನು ಕಾಣದ ಡಚ್ಚರಿಗೆ ಕೊನೆಗೂ ಸ್ಪೇನ್ ತಂಡ ಸೋಲಿನ ರುಚಿ ತೋರಿಸಿತು. ಪಂದ್ಯದ ಪೂರ್ಣಾವಧಿಯ ನಂತರ ಹೆಚ್ಚುವರಿ ಅವಧಿಯ 116 ನೇ ನಿಮಿಷದಲ್ಲಿ ಆಂಡ್ರೆಸ್ ಇನಿಯೆಸ್ಟಾ ಹೊಡೆದ ಏಕೈಕ ಗೋಲು ಸ್ಪೇನ್ ಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿತು.ಉತ್ತಮ ಆಟವಾಡಿದ ಇನೆಷ್ಟಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ನಿರೀಕ್ಷೆಯಂತೆ ಸ್ಪೇನ್ ಪರ ಟೊರೆಸ್ ಕಣಕ್ಕಿಳಿಯಲಿಲ್ಲ. ಪೆಡ್ರೋ, ವಿಲ್ಲಾ ಸಮರ್ಥ ದಾಳಿ ನಡೆಸಿದರೂ ಫಲ ದೊರೆಯಲಿಲ್ಲ. ಮೊದಲಾರ್ಧದಲ್ಲಿ ಮಿಂಚಿದ್ದು ರೊಮೊಸ್ ಮಾತ್ರ. ಹಾಲೆಂಡ್ ಪರ ರೊಬೆನ್ ಮಾತ್ರ ಸ್ಪೇನ್ ಗೋಲಿ ಕ್ಯಾಸಿಲಸ್ ರನ್ನು ಕಾಡಿದರು. ಸ್ನೈಡರ್ ಚೆಂಡು ಸಿಗದೇ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ಪಂದ್ಯದುದ್ದಕ್ಕೂ ವಾನ್ ಪರ್ಸಿ ಉತ್ತಮ ಆಟ ಪ್ರದರ್ಶಿಸಿದರೂ ಸ್ಪೇನ್ ನ ರಕ್ಷಣಾ ಪಂಕ್ತಿಯ ಪುಯೋಲ್, ಕ್ಯಾಪಡಿವಿಲ್ಲಾರನ್ನು ದಾಟಿ ಮುನ್ನುಗ್ಗಲಾಗಲಿಲ್ಲ. ಸ್ಪೇನ್ ರಕ್ಷಣಾ ವ್ಯೂಹವನ್ನು ಹೊಡೆದು ಮುನ್ನುಗ್ಗಲಾಗದೆ ಡಚ್ಚರು ಒರಟಾಟಕ್ಕೆ ಇಳಿದಿದ್ದು ಸುಂದರ ಆಟಕ್ಕೆ ಶೋಭೆ ತರಲಿಲ್ಲ.
ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು
ಯಾರು ಎಷ್ಟು ಗೋಲು ಹೊಡೆದರು ಎಂಬ ಲೆಕ್ಕಾಚಾರಕ್ಕಿಂತ ರೆಫ್ರಿ ಎಷ್ಟು ಜನಕ್ಕೆ ಕಾರ್ಡ್ ತೋರಿಸಿದರು ಎಂಬ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದರು. ಇಂಗ್ಲೆಂಡ್ ರೆಫ್ರಿ ವೆಬ್ ಗಂತೂ ಆಟಗಾರರಿಗೆ ತಿಳಿಹೇಳುವುದರಲ್ಲಿ ಸಾಕು ಸಾಕಾಯಿತು.
ಕೈ ಚೆಲ್ಲಿದ ಅತ್ಯುತ್ತಮ ಅವಕಾಶಗಳು: ಪಂದ್ಯದ 61 ನೇ ನಿಮಿಷದಲ್ಲಿ ರೊಬೆನ್ ಸ್ಪೇನ್ ಪಾಳೆಯಕ್ಕೆ ದಾಳಿ ಮಾಡಿದಾಗ ಇದ್ದದ್ದು ಇಬ್ಬರು ಡಿಫೆಂಡರ್ ಗಳು ಮಾತ್ರ ಆದರೆ, ಚೆಂಡಿನ ಮೇಲೆ ನಿಯಂತ್ರಣ್ ಕಳೆದುಕೊಂಡರೊಬೆನ್ ಗೋಲು ಗಳಿಸುವಲ್ಲಿ ವಿಫಲರಾದರು.
ದ್ವಿತೀಯಾರ್ಧದಲ್ಲಿ ಮತ್ತೊಮ್ಮೆ ಇದೇ ರೀತಿ ಅವಕಾಶ ದೊರೆತಾಗ ಗೋಲಿ ಮಾತ್ರ ಎದುರಿಗಿದ್ದದ್ದು, ಡಿಫೆಂಡರ್ ಪುಯೋಲ್ ಹಿಂದಿನಿಂದ ಚೆಂಡು ಕಸಿಯಲು ಪ್ರಯತ್ನಿಸುತ್ತಿದ್ದರು. ಆದರೆ, ಈ ಬಾರಿ ವಿಫಲರಾದ ರೊಬೆನ್, ಪುಯೋಲ್ ವಿರುದ್ಧ ರೆಫ್ರಿಗೆ ದೂರು ನೀಡಲು ಹೋಗಿ ಹಳದಿ ಕಾರ್ಡ್ ಪಡೆಯಬೇಕಾಯಿತು.
ಡೇವಿಡ್ ವಿಲ್ಲಾ ಉತ್ತಮವಾಗಿ ಆಡಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸಲು ವಿಫಲರಾದರು. ಸ್ಪೇನ್ ಕೋಚ್ ಬೋಸ್ಕಿ ಪೆಡ್ರೊರನ್ನು ಬದಲಿಗೆ ಟೊರೆಸ್ ಅನ್ನು ಇಳಿಸದೆ ನವಸ್ ಅನ್ನು ಕಳಿಸಿದ್ದು, ಅಚ್ಚರಿಯಾದರೂ, ಸೂಕ್ತ ಆಯ್ಕೆ ಅಗಿತ್ತು.
ಯುರೋಪ್ ಖಂಡದ ಹೊರಗೆ ನಡೆದ ಟೂರ್ನಿಯಲ್ಲಿ ಯುರೋಪ್ ರಾಷ್ಟ್ರವೊಂದು ವಿಶ್ವಕಪ್ ಗೆದ್ದಿದ್ದು ಹಾಗೂ ಲೀಗ್ ನಲ್ಲಿ ಮೊದಲ ಪಂದ್ಯ ಸೋತರೂ ಸ್ಪೇನ್ ಕಪ್ ಎತ್ತಿದ್ದು ದಾಖಲೆಯಾಯಿತು.
ಮತ್ತೆ ಹೀರೋ ಪೌಲ್ : ಜರ್ಮನಿಯ ಆಕ್ಟೋಪಸ್ ಪೌಲ್ ಭವಿಷ್ಯ ನಿಜವಾಗಿದೆ. ಸಿಂಗಪುರದ ಮಣಿ ಗಿಳಿ ಭವಿಷ್ಯ ಸುಳ್ಳಾಗಿದೆ. ಬುಕ್ಕಿಗಳ ನೆಚ್ಚಿನ ತಂಡ ಸ್ಪೇನ್ ಗೆದ್ದ ಪರಿಣಾಮ ಬೆಟ್ಟಿಂಗ್ ನಲ್ಲಿ ಹಣದ ಹೊಳೆಯೇ ಹರಿದಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications