ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಮಲ'ದಲ್ಲಿ ಕೆಸರೆರಚಾಟ : ಸದನ ಚೌಪದಿ

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

'ಕಮಲೇ ಕಮಲೋತ್ಪತ್ತಿಃ
ಶ್ರೂಯತೇ ನ ತು ದೃಶ್ಯತೇ'

ಹೀಗೆ ಎರಡು ಸಾಲುಗಳನ್ನು ಸವಾಲಾಗಿ ನೀಡಿ ಸಿಂಹಳದ ರಾಜ ಈ ಚೌಪದಿಯನ್ನು ಅರ್ಥಗರ್ಭಿತವಾಗಿ ಪೂರ್ಣಗೊಳಿಸುವವರಿಗೆ ಬಹುಮಾನ ಘೋಷಿಸುತ್ತಾನೆ.

'ಬಾಲೇ, ತವ ಮುಖಾಂಭೋಜೇ
ಕಥಂ ಇಂದೀವರದ್ವಯಂ!'

ಎಂದು (ವೇಶ್ಯೆಯೋರ್ವಳ ಮುಖದರ್ಶನದಿಂದ ಸ್ಫೂರ್ತಿಗೊಂಡು) ಇನ್ನೆರಡು ಸಾಲುಗಳನ್ನು ಮಹಾಕವಿ ಕಾಳಿದಾಸ ರಚಿಸಿ ಚೌಪದಿಯನ್ನು ಪೂರ್ಣಗೊಳಿಸುತ್ತಾನೆ.

ಈ ಚೌಪದಿಯನ್ನು ಕನ್ನಡದಲ್ಲಿ ಹೀಗೆ ಹೇಳಬಹುದೇನೋ.

'ಕಮಲದಲ್ಲಿ ಕಮಲ ಹುಟ್ಟುವುದನು
ಕೇಳಬಹುದು, ಕಾಣಲಾಗದು.
ಕನ್ನೆ, ನಿನ್ನ ಮುಖಕಮಲದೊಳು
ಕಮಲವೆರಡು ಅದೆಂತಿಹುದು!'

(ಮುಖವೆಂಬ ಕಮಲದಲ್ಲಿ ಕಣ್ಣುಗಳೆಂಬ ಕಮಲಗಳು ಹುಟ್ಟಿವೆಯೆಂದರ್ಥ.)

ಈಗ, ವರ್ತಮಾನದ ಒಂದು ವಿದ್ಯಮಾನ ಕುರಿತು ಎರಡು ಸಾಲುಗಳು.

'ಕಮಲ'ದಲ್ಲಿ ಕೆಸರೆರಚಾಟ, ಬಯ್ಗುಳ, ಒಣ ಗುದ್ದಾಟ
'ಕೈ' ಬಲ ತೋರಿಕೆ, ತೋಳೇರಿಕೆ, ಸದನದಲ್ಲೆ ಊಟ.'

ಇನ್ನೆರಡು ಸಾಲುಗಳನ್ನು ಪ್ರಿಯ ಓದುಗರು ತಂತಮ್ಮ ಕೋಪಾನುಸಾರ ಸೇರಿಸಿಕೊಂಡು ಉಗಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X