ಮರ್ಯಾದಾ ಹತ್ಯೆ ಮಸೂದೆಗೆ ವಿಘ್ನ

ಆಡಳಿತರೂಢ ಕಾಂಗ್ರೆಸ್ ಪಕ್ಷದ ಮುಖ್ಯವಾಗಿ ಹರಿಯಾಣಾ ಮತ್ತು ಪಂಜಾಬ್ ರಾಜ್ಯಗಳ ಸಂಸದರು ಮಸೂದೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಕ್ರೀಡಾ ಸಚಿವ ಮನೋಹರ ಸಿಂಗ್ ಗಿಲ್ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಸಚಿವ ಕಮಲ್ ನಾಥ್ ಅವರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಾರ್ತಾ ಇಲಾಖೆ ಸಚಿವೆ ಅಂಬಿಕಾ ಸೋನಿ, ಮರ್ಯಾದಾ ಹತ್ಯೆ ಸಮಾಜಕ್ಕೆ ಅಂಟಿರುವ ಜಾಡ್ಯ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಆದರೆ, ಈ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಮಗ್ರವಾಗಿ ಅವಲೋಕಿಸಿದ ನಂತರ ಮಸೂದೆ ಮಂಡನೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮರ್ಯಾದಾ ಹತ್ಯೆಗಳ ಇತ್ತೀಚೆಗೆ ಹರಿಯಾಣಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇದನ್ನು ನಿಷೇಧಿಸಬೇಕು ಮತ್ತು ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.












Click it and Unblock the Notifications