ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಕಂಪೆನಿಯಿಂದ ಭ್ರಷ್ಟವಾದ ಭಾರತ

By Mahesh
|
Google Oneindia Kannada News

 US co bribed Indian cos to build power plants
ನವದೆಹಲಿ, ಜು. 7: ಭಾರತೀಯ ಕಂಪೆನಿಗಳಿಂದ ಆಕರ್ಷಕ ಗುತ್ತಿಗೆ ಪಡೆಯಲು ಅಮೆರಿಕದ ಕಂಪೆನಿಯೊಂದು ಲಂಚ ನೀಡಿರುವುದಾಗಿ ಒಪ್ಪಿಕೊಂಡಿದ್ದು, ಈ ಪ್ರಕರಣ ಕೊಂಚ ತಡವಾಗಿ ಬೆಳಕಿಗೆ ಬಂದಿದೆ..

ದೇಶದ ಭಾರೀ ವಿದ್ಯುತ್ ಉಪಕರಣಗಳ ತಯಾರಿಕಾ ಕಂಪೆನಿ ಬಿಹೆಚ್ ಇಎಲ್, ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿ, ಹರ್ಯಾಣ ರಾಜ್ಯ ವಿದ್ಯುತ್ ಮಂಡಳಿ , ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಹಾಗೂ ಭಿಲಾಯ್ ಎಲೆಕ್ಟ್ರಿಕ್ ಕಂಪೆನಿಗಳೂ ಸೇರಿದಂತೆ ಇತರ ಕಂಪೆನಿಗಳ ಅಧಿಕಾರಿಗಳಿಗೆ ಲಂಚ ನೀಡಿರುವುದಾಗಿ ಅಮೆರಿಕದ ಸ್ಥಳೀಯ ನ್ಯಾಯಾಲಯಕ್ಕೆ ನೀಡಿದ ತಪ್ಪೊಪ್ಪಿಗೆ ಯಲ್ಲಿ ಕೊಲಂಬಿಯಾ ಮೂಲದ ಕಂಟ್ರೋಲ್ ಕಾಂಪೊನೆಂಟ್ ಇಂಕ್ ಮೊಹರು ಮಾಡಲಾದ ಲಕೋಟೆಯಲ್ಲಿ ತಿಳಿಸಿದೆ.

ಈ ಲಂಚವನ್ನು 2003ರಿಂದ 2007 ರ ಅವಧಿಯಲ್ಲಿ ನೀಡಲಾಗಿದ್ದು ಭಾರತವಲ್ಲದೆ, ಚೀನಾ , ಸೌದಿ ಅರಬ್ ಗಣ ರಾಜ್ಯ ಹಾಗೂ ಕತಾರ್ ನ ಕಂಪೆನಿಯ ಅಧಿಕಾರಿಗಳಿಗೂ ಲಂಚ ನೀಡಿಲಾಗಿದೆ. ಎನ್‌ಟಿಪಿಸಿಯ ಸಿಪಟ್ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕಂಪೆನಿಗೆ ಉಪಕರಣಗಳನ್ನು ಅರಬರಾಜು ಮಾಡುವ ಗುತ್ತಿಗೆ ಪಡೆಯಲು 1,63,449 ಡಾಲರ್ ಗಳಷ್ಟು ಲಂಚ ನೀಡಿರುವುದಾಗಿ ಕಂಪನಿ ತಿಳಿಸಿದೆ.

ಈ ದೊಡ್ಡ ಮೊತ್ತದ ಲಂಚವನ್ನು ಎರಡು ಕಂತುಗಳಲ್ಲಿ ನೀಡಲಾಗಿದ್ದು ಮೊದಲ ಕಂತನ್ನು 2005 ರ ನವೆಂಬರ್ 25 ರಂದು ಕಂಪೆನಿಯ ಸ್ವೀಡನ್ ನ ಹ್ಯಾಂಡೆಲ್ಸ್ ಬ್ಯಾಂಕಿನ್ ಬ್ಯಾಂಕಿನ ಖಾತೆಯಿಂದ ನ್ಯೂಯಾರ್ಕ್ ನ ಡ್ರೆಸ್‌ಡ್ನರ್ ಬ್ಯಾಂಕಿನ ಖಾತೆಗೆ 26,865 ಡಾಲರ್ ನೀಡಲಾಗಿದೆ.

ಎರಡನೇ ಕಂತಿನ ಮೊತ್ತವಾದ 1,36,584 ಡಾಲರ್ ಗಳನ್ನು ಅಕ್ಟೋಬರ್ 2006 ರಂದು ಅದೇ ಬ್ಯಾಂಕಿನಿಂದ ಲಾಟ್ವಿಯಾದ ಬಾಲ್ಟಿಕ್ ಇಂಟರ್ ನ್ಯಾಷನಲ್ ಬ್ಯಾಂಕಿನ ಖಾತೆಗೆ ನೀಡಲಾಗಿದೆ ಎಂದು ಅಮೇರಿಕಾದ ಎಫ್ ಬಿಐ ಆರೋಪಿಸಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ ಕಂಪೆನಿ ಎರಡು ಕಂತುಗಳಲ್ಲಿ 2006ರ ನವೆಂಬರ್ 6 ಹಾಗೂ 2009 ರ ಜನವರಿ 9 ರಂದು 69,012 ಡಾಲರ್ ಗಳನ್ನು ಬಿಹೆಚ್ ಇಎಲ್ ಹಾಗೂ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಗೆ ನೀಡಿದೆ. ಬಿಹೆಚ್ ಇಎಲ್ ನ ಅನೇಕ ಅಧಿಕಾರಿಗಳಿಗೆ ಇತರ ಪ್ರಕರಣಗಳಲ್ಲಿ 5000 ಡಾಲರ್ ಗಳಿಗೂ ಕಡಿಮೆ ಮೊತ್ತದ ಲಂಚವನ್ನು ಕೆಲ ಬಾರಿ ನೀಡಲಾಗಿದೆ.

2007 ರಲ್ಲಿ ಭಿಲಾಯ್ ಲೆಕ್ಟ್ರಿಕಲ್ಸ್ ನ ಅಧಿಕಾರಿಗಳಿಗೆ 6600 ಡಾಲರ್ ಲಂಚವನ್ನು ನೀಡಲಾಗಿದ್ದು, 2007 ರ ಜುಲೈ 7 ರಂದು ಹರ್ಯಾಣ ರಾಜ್ಯ ವಿದ್ಯುತ್ ಮಂಡಳಿ ಅಧಿಕಾರಿಗಳಿಗೆ15,802 ಡಾಲರ್ ಲಂಚವನ್ನು ನೀಡಲಾಗಿದೆ. ಆದರೆ ಇಷ್ಟು ಲಂಚವನ್ನು ನೀಡಿ ಎಷ್ಟು ಮೊತ್ತದ ಗುತ್ತಿಗೆಗಳನ್ನು ಪಡೆಯಲಾಯಿತು ಎಂಬ ವಿಚಾರದಲ್ಲಿ ಇನ್ನೂ ಸ್ಪಷ್ಟ ಚಿತ್ರಣ ದೊರೆಯಬೇಕಿದೆ.

ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ ಕಂಟ್ರೋಲ್ ಕಾಂಪೊನೆಂಟ್ ಇಂಕ್ 2003 ರಿಂದ 2007ರ ವರೆಗೆ 30 ದೇಶಗಳ ಅಧಿಕಾರಿಗಳಿಗೆ 236 ಭ್ರಷ್ಟ ಪಾವತಿಗಳನ್ನು ಮಾಡಿದ್ದು ಇದರಿಂದ ಕಂಪೆನಿಯ ನಿವ್ವಳ ಆದಾಯ 46.5 ಮಿಲಿಯ ಡಾಲರ್ ಗಳಷ್ಟು ಹೆಚ್ಚಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X