ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ : ಕೇಂದ್ರ
ನವದೆಹಲಿ,
ಜು. 7 : ಬೆಳಗಾವಿ, ಗುಲ್ಬರ್ಗಾ ಮತ್ತಿತರ ಗಡಿ ಭಾಗಗಳು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಈ ಪ್ರದೇಶಗಳು ಅಬಾಧಿತವಾಗಿ ಮುಂದುವರಿಯಲಿವೆ ಎಂದು ಕೇಂದ್ರ ಸರಕಾರ ಸುಪ್ರಿಂಕೋರ್ಟ್ ಗೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿದೆ. ಇದರೊಂದಿಗೆ ರಾಜ್ಯಕ್ಕೆ ತಾತ್ಕಾಲಿಕ ಜಯ ದೊರಕಿದಂತಾಗಿದೆ. id="toptextpromo">ಈ
ಪ್ರದೇಶಗಳು ತನಗೆ ಸೇರಿದ್ದು ಎಂದು ಮಹಾರಾಷ್ಟ್ರ ಸರಕಾರ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು. ಇಂಥ ವಿವಾದಾತೀತ ಅರ್ಜಿಯನ್ನು ಸಲ್ಲಿಸಿದ್ದಕ್ಕೆ ಮಹಾರಾಷ್ಟ್ರ ಸರಕಾರದ ಮೇಲೆ ಭಾರಿ ದಂಡ ವಿಧಿಸಬೇಕು ಎಂದು ಕೇಂದ್ರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಯಾವುದೇ ಪ್ರದೇಶವನ್ನು ಯಾವುದೇ ರಾಜ್ಯಕ್ಕೆ ಸೇರ್ಪಡೆ ಮಾಡಲು ಹಲವು ಮಾನದಂಡ ಅನುಸರಿಸಲಾಗುವುದು. ಇದರಲ್ಲಿ ಭಾಷೆಯೂ ಒಂದು. ಆದರೆ, ಅದೊಂದೇ ಮಾನದಂಡವಲ್ಲ ಎಂದು ಕೇಂದ್ರ ತನ್ನ ಪ್ರಮಾಣ ಪತ್ರದಲ್ಲಿ ವಿವರಿಸಿದೆ. id='are-slot-1' class='oiad oi-axt oiadv'> id='top-searched-articles'>ಬಹುಸಂಖ್ಯಾತ
ಮರಾಠಿಗರನ್ನು ಹೊಂದಿರುವ ಬೆಳಗಾವಿ, ಬೀದರ್, ಕಾರವಾರ ಜಿಲ್ಲೆಗಳ 814 ಗ್ರಾಮಗಳನ್ನು ಕರ್ನಾಟಕಕ್ಕೆ ತಪ್ಪಾಗಿ ಸೇರಿಸಲಾಗಿದೆ ಎಂಬ ನೆರೆಯ ಮಹಾರಾಷ್ಟ್ರದ ವಾದ ಸರಿಯಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.











Click it and Unblock the Notifications