ಅಡ್ವಾಣಿ ಗಮ್ಮತ್ತು : ಲೋಕಾಯುಕ್ತರ ನಿರುತ್ತರ

ಇಂತಹ ಪ್ರಶ್ನೆಯೊಂದು ಎದುರಾಗಿದ್ದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರಿಗೆ. ಆಗ ಪ್ರತಿಕ್ರಿಯಿಸಿದ ಅವರು, ಅದು ನಿಮ್ಮ ಅಭಿಪ್ರಾಯ, ನಿಮಗೆ ಬಿಟ್ಟದ್ದು ಎಂದು ನಗುಮುಖದಿಂದಲೇ ಉತ್ತರಿಸಿ ಕಾರನ್ನು ಏರಿ ಹೊರಟುಹೋದರು.
ಭಾರತದ ಸಂವಿಧಾನಕ್ಕೆ 60ವರ್ಷ ತುಂಬಿದ ನೆನಪಿಗೆ ಎಂ ಎಸ್ ಕೃಷ್ಣನ್ ಸ್ನರಣ ಸಂಸ್ಥೆಯು ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ರಾಜ್ಯಪಾಲರಿಗೆ ತಿಳಿಸದೆ ಬಹಿರಂಗಗೊಳಿಸಿರುವ ಬಗ್ಗೆ ಮಾಫಿ ಕೇಳುತ್ತೇನೆ. ಇಂದು ಇಲ್ಲವೇ ನಾಳೆ ಅವರನ್ನು ಭೇಟಿ ಮಾಡಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಸಂತೋಷ ಹೆಗ್ಡೆ ವಿವರಿಸಿದರು.
ಈ ಹಿಂದಿನಿಂದಲೂ ಪ್ರಧಾನಮಂತ್ರಿಗಳು, ರಾಜ್ಯಪಾಲರು, ಉನ್ನತ ಮಟ್ಟದ ಅಧಿಕಾರಿಗಳೂ ಭ್ರಷ್ಟಾಚಾರ ಹಾಗೂ ದುರಾಡಳಿತ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಒಂದು ಮಾತು ಸತ್ಯ ಸರಕಾರ ಮಾತಿನ ತಪ್ಪಿಗೆ ನಡೆದರೆ, ಒಂದು ನಿಮಿಷವೂ ಈ ಕುರ್ಚಿಯಲ್ಲಿ ಕೂರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯ ಬಂದು 63 ವರ್ಷಗಳಾಗಿವೆ. ಸಾವಿರಾರು ಯೋಜನೆಗಳು ಜಾರಿಗೆ ಬಂದಿವೆ. 2007-08ರಲ್ಲಿ ಕೇಂದ್ರ ಸರಕಾರ 8 ಯೋಜನೆಗಳನ್ನು ಪರಿಚಯಿಸಿದರು. ಅಕ್ಷರ ದಾಸೋಹ, ಪ್ರಧಾನಮಂತ್ರಿ ರಸ್ತೆ ಯೋಜನೆ, ಮುಂತಾದವು ಅದರಲ್ಲಿವೆ. ಆದರೆ, ಇದಕ್ಕೆ ಸಂಬಂಧಿಸಿದ 51 ಸಾವಿರ ಕೋಟಿ ರುಪಾಯಿ ಎಲ್ಲಿ ಮಾಯವಾಯಿತು ಎಂದು ಹೆಗ್ಡೆ ಪ್ರಶ್ನಿಸಿದ್ದಾರೆ.












Click it and Unblock the Notifications