ಕರುಣಾನಿಧಿ ಅವರಿಗೊಂದು ದೇವಾಲಯ
ಚೆನ್ನೈ,
ಜು. 3 : ತಮಿಳುನಾಡಿನಲ್ಲಿ ಸಿನಿಮಾ ತಾರೆಯರಿಗೆ ದೇವಸ್ಥಾನ ಕಟ್ಟಿಸುವುದು, ಆರಾಧಿಸುವುದು ರೂಢಿ. ಆದರೆ, ಈ ಬಾರಿ ಅಲ್ಲಿನ ಜನ ರಾಜಕಾರಣಿಗಳತ್ತ ಮುಖಮಾಡಿದ್ದಾರೆ. ದೇಶದ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಗೌರವಾರ್ಥವಾಗಿ ಡಿಎಂಕೆ ಕಾರ್ಯಕರ್ತನೊಬ್ಬ ದೇವಸ್ಥಾನ ನಿರ್ಮಿಸುತ್ತಿದ್ದಾನೆ. id="toptextpromo">ವೆಲ್ಲೂರು
ಜಿಲ್ಲೆಯ ಗುಡಿಯಾಟ್ಟಂ ಸಮೀಪದ ಸಮಿರಡ್ಡಿಪಲ್ಲಿ ಎಂಬಲ್ಲಿ ಸುಮಾರು ಎರಡು ಲಕ್ಷ ರುಪಾಯಿ ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯ ಜಿ ಆರ್ ಕೃಷ್ಣಮೂರ್ತಿ ಎಂಬುವವರು ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ದೇವಾಲಯದಲ್ಲಿ ಎರಡೂವರೆ ಅಡಿ ಎತ್ತರದ ಕಲೈಂಜರ್ ಪುತ್ಥಳಿಯನ್ನು ನಿರ್ಮಸಲಾಗುವುದು. ದೇವಾಲಯ ಶೀಘ್ರವೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಕೃಷ್ಣಮೂರ್ತಿ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಕರುಣಾನಿಧಿ
ತಮ್ಮ ಸಾರ್ವಜನಿಕ ಜೀವನದಲ್ಲಿ ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ಪ್ರೇರಿತರಾದ ತಾವು ಅವರ ದೇವಾಲಯವನ್ನು ನಿರ್ಮಿಸುತ್ತಿರುವೆ. ಕರುಣಾನಿಧಿ ಅವರು ನಾಸ್ತಿಕರಾಗಿದ್ದರೂ ಸಹ ನಾವು ಅವರನ್ನು ದೇವರೆಂದು ಭಾವಿಸುತ್ತೇವೆ. ಇದರಿಂದ ಅವರನ್ನು ನಿತ್ಯ ಪೂಜಿಸಲು ಅವಕಾಶ ಸಿಗಲಿದೆ ಎಂದು ಅವರು ಹೇಳಿದರು.











Click it and Unblock the Notifications