ನಿತ್ಯಾನಂದನ ಸಂಗಕ್ಕೆ ಕನ್ಯೆಯರು ರೆಡಿ!

Swami Nithyananda
ಚೆನ್ನೈ, ಜು. 2 : ತಮಿಳು ನಟಿ ರಂಜಿತಾ ಸೇರಿದಂತೆ ಅನೇಕ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ ಸಿಕ್ಕಿ ಬಿದ್ದಿರುವ ಕಳಂಕಿತ ಸ್ವಾಮಿ ನಿತ್ಯಾನಂದನ ಮೇಲೆ ಆತನ ಅನುಯಾಯಿಗಳಿಗೆ ಭಕ್ತಿ ಹಾಗೂ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಸುದ್ದಿಯಿದೆ. ನಿತ್ಯಾನಂದನ ಧ್ಯಾನಪೀಠಂನಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಂದುವರಿಸಲು ಇಬ್ಬರು ಕನ್ಯಾಕುಮಾರಿಯರು ಮುಂದೆ ಬಂದಿದ್ದಾರೆ.

ಮಾ ನಿತ್ಯ ಪ್ರೀತಾನಂದ ಅಲಿಯಾಸ್ (29) ಮತ್ತು ಮಾ ನಿತ್ಯಾಪ್ರಣವಾನಂದ ಅಲಿಯಾಸ್ ಚಿತ್ರೇಶ್ವರಿ(28) ಈ ಇಬ್ಬರೂ ಸ್ವಾಮಿ ನಿತ್ಯಾನಂದನ ಅಶ್ರಮದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮುಂದುವರೆಸಲು ಬಯಸಿದ್ದಾರೆ. ಈ ಇಬ್ಬರು ಅರ್ಥಶಾಸ್ತ್ರದಲ್ಲಿ ಪದವೀಧರರಾಗಿವುದು ವಿಶೇಷ. ಹಿಂದೆ ಈ ಇಬ್ಬರು ಧ್ಯಾನಪೀಠಂ ಆಶ್ರಮದ ವಾಸಿಗಳಾಗಿದ್ದರು. ನಿತ್ಯಾನಂದ ಲೈಂಗಿಕ ಹಗರಣದಲ್ಲಿ ಪಾಲ್ಗೊಂಡಿರುವುದು ಬಯಲಾಗುತ್ತಿದ್ದಂತೆ ಕನ್ಯಾಕುಮಾರಿಯಯರನ್ನು ಅವರ ಮನೆಯವರು ಅವರನ್ನು ಸ್ವಂತ ಮನೆ ಕರೆದು ಹೋಗಿದ್ದರು.

ಇದೀಗ ಈ ಇಬ್ಬರು ಬ್ರಹ್ಮಚಾರಿಣಿ ಯುವತಿಯರು ಮತ್ತೆ ನಿತ್ಯಾನಂದನ ಸಂಗ ಬಯಸಿದ್ದಾರೆ. ಆದರೆ, ಈ ಯುವತಿಯರ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಈ ಹುಡುಗಿಯರು, ತಮ್ಮ ಮನೆಯವರು ನಿತ್ಯಾನಂದನ ಮೇಲೆ ಅಪಹರಣ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಆದರೆ, ಸ್ವಇಚ್ಚೆಯಿಂದ ನಾವು ಧ್ಯಾನಪೀಠಂ ಆಶ್ರಮಕ್ಕೆ ತೆರಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ವಯಸ್ಕರಾಗಿದ್ದು, ನಮ್ಮ ಜೀವನದ ತೀರ್ಮಾನವನ್ನು ನಾವೇ ತೆಗೆದುಕೊಳ್ಳಬಲ್ಲೇವು. ಆಶ್ರಮಕ್ಕೆ ತೆರಳಲು ಅನುವು ಮಾಡಿಕೊಡಬೇಕು ಎಂದು ಕನ್ಯಾಕುಮಾರಿಯರು ಚೆನ್ನೈ ಪೊಲೀಸ್ ಆಯುಕ್ತ ಟಿ ರಾಜೇಂದ್ರ ಅವರ ಮೊರೆ ಹೋಗಿದ್ದಾರೆ. ನಮಗೆ ನಿತ್ಯಾನಂದನ ಮೇಲೆ ಸಂಪೂರ್ಣ ನಂಬಿಕೆ ಉಂಟು ಎಂದು ಪೊಲೀಸರಿಗೆ ಬರೆದುಕೊಟ್ಟ ಪತ್ರದಲ್ಲಿ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+