ನಾನೇನು ಮೋಸಗಾರನಲ್ಲ, ದುಡ್ಡು ನೀಡುವೆ: ಗೌಡ

ವೈಯಕ್ತಿಕ ತಿರುಗಾಟಕ್ಕಾಗಿ ಸರಕಾರಿ ವಿಮಾನ ಬಳಸಿಕೊಂಡಿದ್ದ ಪ್ರಕರಣದ ಕುರಿತಂತೆ ದೆಹಲಿ ಹೈಕೋರ್ಟ್ ತೀರ್ಪು ನೀಡಿದ ಮೂರು ದಿನಗಳೊಳಗಾಗಿ 54ಲಕ್ಷ ರುಪಾಯಿಯನ್ನು ಹಣವನ್ನು ಪಾವತಿಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋ: ವಾಯುಸೇನೆ ವಿಮಾನದಲ್ಲಿ ಗೌಡರಿಂದ ಬಿಟ್ಟಿ ಹಾರಾಟ
'ಪ್ರಕರಣದ ಕುರಿತು ನ್ಯಾಯಾಲಯ ತೀರ್ಪು ನೀಡಿದ ಮೂರು ದಿನಗಳೊಳಗಾಗಿ ನಾನು ಎಲ್ಲಾ ಬಾಕಿ ಮೊತ್ತವನ್ನು ಪಾವತಿಸುತ್ತೇನೆ. ಯಾವುದೇ ಬಾಕಿ ಹಣವನ್ನು ತಾನು ವಂಚಿಸುವ ಇರಾದೆ ಹೊಂದಿಲ್ಲ'. ಪ್ರಕರಣ ಕೋರ್ಟ್ ನಲ್ಲಿದ್ದು, ದೆಹಲಿ ಹೈಕೋರ್ಟ್ ತೀರ್ಪು ನೀಡಿದ ಮೂರು ದಿನಗಳೊಳಗಾಗಿ 54ಲಕ್ಷ ರೂಪಾಯಿಯನ್ನು ಹಣವನ್ನು ಪಾವತಿಸುವೆ ಎಂದು ಬುಧವಾರ ದೇವೇಗೌಡರು ಹೇಳಿದರು.
1996-97ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿದ್ದ ಗೌಡರು, ಉತ್ತರಪ್ರದೇಶದ ಚುನಾವಣೆಯಲ್ಲಿ ಜನತಾ ದಳದ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ವಾಯುಸೇನೆ ವಿಮಾನವನ್ನು ಬಳಸಿದ್ದರು. ಅಧಿಕೃತ ಕಾರ್ಯಕ್ರಮಗಳಲ್ಲದೆ ತನ್ನ ವೈಯಕ್ತಿಕ ಕಾರ್ಯಗಳಿಗಾಗಿ ಭಾರತೀಯ ವಾಯು ಸೇನೆಗೆ ಸೇರಿದ ವಿಮಾನಗಳನ್ನು ಬಳಸಿಕೊಂಡಿದ್ದರು.
ಹಣವನ್ನು ವಾಪಾಸ್ ಮಾಡಲು ಐಈಫ್ ಸೂಚಿಸಿ ನೋಟಿಸ್ ನೀಡಿದ್ದರೂ, ಗೌಡರು ತಮ್ಮ ವಕೀಲರಿಗೆ ಕೇಸ್ ನ ವಿವರ ನೀಡಿ ನೆಮ್ಮದಿಯಿಂದ ಇದ್ದ್ದರು. ನನಗೆದುಡ್ಡುಕೊಡುವ ಯಾವುದೇ ಕಾರ್ಪೊರೇಟ್ ಕಂಪೆನಿಗಳಿಲ್ಲ. ಕರ್ನಾಟಕದ ಜನತೆ, ರೈತರು ಈ ದೇವೇಗೌಡನನ್ನು ಜೈಲಿಗೆ ಹೋಗಲು ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ದೇವೇಗೌಡರು ಹೇಳಿದ್ದಾರೆ.












Click it and Unblock the Notifications