ಪೆರುಗ್ವೆ ಗೆದ್ದರೆ ರೂಪದರ್ಶಿ ಲಾರಿಸ್ಸಾ ಬೆತ್ತಲೆ ಓಟ

ಪೆರುಗ್ವೆಯ 24ರ ಹರೆಯದ ಲಾರಿಸ್ಸಾ ರಿಕ್ವೆಲ್ಮೆ ಖ್ಯಾತ ರೂಪದರ್ಶಿಒಳ ಉಡುಪಿನ ಜಾಹೀರಾತಿಗೆ ಫೇಮಸ್. ಡೈಲಿ ಮೇಲ್ ವರದಿಯಂತೆ, ವಿಶ್ವಕಪ್ ಪಂದ್ಯಾವಳಿಯ ವೇಳೆ ಲಾರಿಸ್ಸಾ ತನ್ನ ಕುಂಭಕುಚಗಳ ಮಧ್ಯದಲ್ಲಿ ಮೊಬೈಲ್ ಫೋನ್ ಅನ್ನು ಭದ್ರವಾಗಿರಿಸಿಕೊಂಡು ಛಾಯಾಗ್ರಾಹಕರ ಗಮನ ಸೆಳೆದಿದ್ದರು. ಈಗ ಆಜಾಗದಲ್ಲಿ ವಿಶ್ವಕಪ್ ಅನ್ನು ಇರಿಸಿಕೊಳ್ಳುವ ಬಯಕೆಯಂತೆ.
ವಿಶ್ವಕಪ್ ವಿಡಿಯೋಗಳು:
ಕ್ವಾಟರ್ ಫೈನಲ್ಸ್ ಗೆ ಭರ್ಜರಿ ಸಿದ್ಧತೆ
ಇಂಗ್ಲೆಂಡ್ ಗೆ ಗರ್ವಭಂಗ, ಜರ್ಮನಿಗೆ ವಿಜಯೋತ್ಸವ
ಚಿಲಿಯನ್ನು ಹೊಸಕಿದ ಸಾಂಬಾ ಬಾಯ್ಸ್
ಲ್ಯಾಂಪರ್ಡ್ ಕ್ಷಮೆ ಕೋರಿದ ಫೀಫಾ
ಪೆರುಗ್ವೆ ವಿಶ್ವಕಪ್ ಗೆದ್ದರೆ ಮೈಯೆಲ್ಲಾ ಪೆರುಗ್ವೆ ಬಾವುಟದ ಬಣ್ಣ ಬಳಿದುಕೊಂಡು ಹುಟ್ಟುಡುಗೆಯಲ್ಲಿ ವಿಜಯೋತ್ಸವದ ಓಟ ಓಡುವುದಾಗಿ ಹೇಳಿದ್ದಾರೆ. ಲಾರಿಸ್ಸಾ ವಿಶ್ವಕಪ್ ಮೈದಾನದಲ್ಲಿ ಕಾಣಿಸಿಕೊಂಡ ಮೇಲೆ ಇಂಟರ್ ನೆಟ್ ನಲ್ಲಿ ಲಾರಿಸ್ಸಾಳ ಬಗ್ಗೆ ಹುಡುಕಾಟ ಹೆಚ್ಚುತ್ತಿದೆ.
ರೋಚಕತೆಗೆ ಸಾಕ್ಷಿಯಾದ ಈ ವಿಶ್ವಕಪ್ ನ ಪ್ರಥಮ ಪೆನಾಲ್ಟಿ ಶೂಟೌಟ್ ನಲ್ಲಿ ಪೆರುಗ್ವೆ 5-3 ಅಂತರದಲ್ಲಿ ಜಪಾನ್ ಅನ್ನು ಮಣಿಸಿ, ಕ್ವಾಟರ್ ಫೈನಲ್ ಹಂತ ತಲುಪಿದ್ದು, ಈಗ ಪ್ರಬಲ ತಂಡ ಸ್ಪೇನ್ ವಿರುದ್ಧ ಸೆಣೆಸಲಿದೆ.
ಲಾರಿಸ್ಸಾಳ ಬೆತ್ತಲೆ ಓಟದ ಘೋಷಣೆಗೂ ಮುನ್ನ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಕೂಡಾ ಇದೇ ರೀತಿ ಘೋಷಣೆ ಮಾಡಿದ್ದರು. ಅರ್ಜೆಂಟೀನಾ ಗೆದ್ದರೆ ಬ್ಯುನೆಸ್ ಐರೀಸ್ ನ ಬೀದಿಗಳಲ್ಲಿ ನಗ್ನವಗಿ ಓಡುತ್ತೇನೆ ಎಂದಿದ್ದರು. ಲಾರಿಸ್ಸಾಳ ಘೋಷಣೆ ನಂತರ ರಸಿಕ ಯುವಕರು ಪೆರುಗ್ವೆ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರಂತೆ.












Click it and Unblock the Notifications