ರಾಜಕೀಯ ಸೇರಲ್ಲ : ಸಂತೋಷ ಹೆಗ್ಡೆ
ಬೆಂಗಳೂರು, ಜೂ. 30 : ನಾಲ್ಕು ವರ್ಷಗಳ ಅವಧಿಯಲ್ಲಿ ಲೋಕಾಯುಕ್ತ ಸ್ಥಾನಕ್ಕೆ ಚ್ಯುತಿ ಬರದ ಹಾಗೆ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ. ಆದರೆ, ಯಾವುದೇ ಕಾರಣಕ್ಕೂ ರಾಜಕೀಯ ಸೇರುವುದಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸ್ಪಷ್ಟಪಡಿಸಿದರು.
ವಿಜಯನಗರದ ಬಂಟ ಸಂಘದ ಸಭಾಂಗಣದಲ್ಲಿ ಸೋಮವಾರದಂದು ಆರ್ಎನ್ಎಸ್ ವಿದ್ಯಾನಿಕೇತನದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈಗ ರಾಜೀನಾಮೆ ನೀಡಿರುವುದು ನುಣುಚಿಕೊಳ್ಳಲು ಅಲ್ಲ. ನಾಲ್ಕು ವರ್ಷಗಳಲ್ಲಿ ಈ ವೃತ್ತಿ ತೃಪ್ತಿ ತಂದಿದೆ. ಶಾಲಾ ಕಾಲೇಜು ಮಕ್ಕಳಿಗೆ, ಜನ ಸಾಮಾನ್ಯರಿಗೆ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಶ್ರಮಿಸುತ್ತೇನೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಯಾರ ಬೆಂಬಲಕ್ಕೂ ನಾನು ರಾಜೀನಾಮೆ ಹಿಂತೆಗೆದುಕೊಳ್ಳುವುದಿಲ್ಲ, ಸ್ವಇಚ್ಚೆಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಜೀವನದಲ್ಲಿ ಏನೇ ಆಗಿ ಪೋಷಕರ ಕನಸು ಹಾಗೂ ನಿಮ್ಮ ಗುರಿಯಂತೆ ದೊಡ್ಡ ಅಧಿಕಾರಿಗಳಾಗಿ, ಆದರೆ ಅದಕ್ಕಿಂತ ಮಿಗಿಲಾಗಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಮಾನವರಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಸಂತೋಷ ಹೆಗ್ಡೆ ತಿಳಿ ಹೇಳಿದರು.












Click it and Unblock the Notifications