ಮಹಿಳೆಯ ಕೊಲೆಗೈದು, ಊರಿಗೆ ಊರೇ ಪರಾರಿ

ಕೊಲೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಕಲ್ಲಿನಿಂದ ಹೊಡೆದ ಊರಿನ ಅಷ್ಟೂ ಜನ ನಾಪತ್ತೆಯಾಗಿದ್ದು, ಪ್ರಕರಣಕ್ಕೆ ರಾಜಕೀಯ ಲೇಪ ಅಂಟಿಕೊಂಡಿದೆ. ಮೃತ ಹೊನ್ನಮ್ಮ ಬಿಜೆಪಿ ಕಾರ್ಯಕರ್ತೆ ಆಗಿದ್ದು, ವೈಯಕ್ತಿಕ ದ್ವೇಷದ ಕಾರಣ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಊರಿನ ಚರಂಡಿ ರಿಪೇರಿ, ಡೈನೇಜ್ ಸ್ವಚ್ಛಗೊಳಿಸಲು ಬಂದವರ ಮೇಲೆ ಹೊನ್ನಮ್ಮ ಎಗರಾಡಿ, ರಂಪ ರಾಮಾಯಣ ಮಾಡಿದ್ದಳು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೊನ್ನಮ್ಮನ ವಿರುದ್ಧ ದೂರು ನೀಡಿದ್ದರು.
ಆ ಘಟನೆ ನಂತರ ಐದಾರು ದಿನಗಳ ಕಲ ನಾಪತ್ತೆಯಾಗಿದ್ದ ಹೊನ್ನಮ್ಮ ಜಾಮೀನು ಪಡೆದು ಊರಿಗೆ ಬಂದಿದ್ದರು. ಹೊನ್ನಮ್ಮನನ್ನು ನೋಡಿದ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಸ್ ಐ ರವಿಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications