ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಕನಸನ್ನು ಹೊಸಕಿಹಾಕಿದ ಜರ್ಮನಿ

By Prasad
|
Google Oneindia Kannada News

Thomas Mueller
ಜೋಹಾನ್ಸ್ ಬರ್ಗ್, ಜೂ. 28 : ಹಳೆ ವೈರಿಯನ್ನು 4-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸದೆಬಡಿದಿರುವ ಜರ್ಮನಿ ಫೀಫಾ ವಿಶ್ವಕಪ್ 2010ರ ಕ್ವಾರ್ಟರ್ ಫೈನಲ್ ತಲುಪಿದೆ. ವಿವಾದಗಳಿಂದ ಜರ್ಝರಿತವಾಗಿದ್ದ ಇಂಗ್ಲೆಂಡ್ ತಂಡಕ್ಕೆ ಅದೃಷ್ಟದ ಕೆಂಪು ಜರ್ಸಿ ಧರಿಸಿದರೂ ಅದೃಷ್ಟ ಕೂಡಿಬರಲಿಲ್ಲ.

ರೆಡ್ ಕಾರ್ಡ್ ಪಡೆದು ಕಳೆದ ಪಂದ್ಯದಲ್ಲಿ ಆಡದೆ ವಂಚಿತನಾಗಿದ್ದ ಮಿರೋಸ್ಲಾವ್ ಕ್ಲೋಸ್ ಅವರ ಸೇರ್ಪಡೆ ಜರ್ಮನಿ ತಂಡಕ್ಕೆ ಆನೆಬಲ ತಂದಿತು. ಪಂದ್ಯ ಆರಂಭವಾಗಿ 20ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರಲ್ಲದೆ, ಎರಡನೇ ಗೋಲು ಗಳಿಸಲು ಕೂಡ ಕ್ಲೋಸ್ ಕಾರಣರಾದರು. ಕಲಾತ್ಮಕವಾಗಿ ಬಾಲನ್ನು ಕೋಲ್ಸ್ ಅವರು ಥಾಮಸ್ ಮುಲ್ಲರ್ ಗೆ ಪಾಸ್ ಮಾಡಿದರು. ಮುಲ್ಲರ್ ಇಂಗ್ಲೆಂಡ್ ಭದ್ರಕೋಟೆಯನ್ನು ಭೇದಿಸಿ ತಳ್ಳಿದ ಬಾಲನ್ನು ಲುಕಾಸ್ ಪೊಡೋಸ್ಕಿ 37ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿದರು.

2-0 ಗೋಲುಗಳ ಅಂತರದಿಂದ ಗೆಲ್ಲುವ ಪಣತೊಟ್ಟಿದ್ದ ಇಂಗ್ಲೆಂಡ್ ತನ್ನ ಮೊದಲ ಗೋಲನ್ನು ಮೊದಲ ಅರ್ಧದಲ್ಲಿ ದಾಖಲಿಸಿತು. ಮ್ಯಾಥ್ಯೂ ಅಪ್ಸನ್ ಇಂಗ್ಲೆಂಡಿಗೆ ಮೊದಲ ಗೋಲು ತಂದು ಕೊಟ್ಟರು. ಅಭಿಮಾನಿಗಳ ಆಕ್ರೋಷಕ್ಕೆ ಕಾರಣರಾಗಿದ್ದ ಇಂಗ್ಲೆಂಡ್ ತಂಡದ ಬಲಹೀನತೆಯ ಲಾಭ ಪಡೆದ ಜರ್ಮನಿ ದ್ವಿತೀಯಾರ್ಧದಲ್ಲಿ ನಾಲ್ಕು ನಿಮಿಷದಲ್ಲಿ ಮತ್ತೆರಡು ಗೋಲು ಗಳಿಸಿ ತನ್ನ ಅಧಿಪತ್ಯ ಸ್ಥಾಪಿಸಿತು. ಕಡೆ ಎರಡು ಗೋಲು ಗಳಿಸಿದ ಮುಲ್ಲರ್ ತಾವೆಂಥ ಅಪಾಯಕಾರಿ ಆಟಗಾರ ಎಂಬುದನ್ನು ತೋರಿಸಿಕೊಟ್ಟರು.

ಎರಡೂ ತಂಡಗಳ ನಡುವಿನ ವೈರತ್ವ ಪಂದ್ಯಕ್ಕೆ ಹೆಚ್ಚಿನ ಮಹತ್ವ ನೀಡಿತ್ತು. 1990ರಲ್ಲಿ ಪೆನಾಲ್ಟಿ ಶೂಟೌಟಲ್ಲಿ ಜರ್ಮನಿಗೆ ಶರಣಾಗಿದ್ದ ಇಂಗ್ಲೆಂಡ್ ಈ ಬಾರಿ ಸೇಡು ತೀರಿಸಿಕೊಳ್ಳಲು ಸಂಪೂರ್ಣ ವಿಫಲವಾಯಿತು. ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನಿ ತಂಡ ಡಿಯಾಗೋ ಮರಡೋನಾರಿಂದ ತರಬೇತಿ ಪಡೆದ ಅರ್ಜೆಂಟಿನಾ ತಂಡವನ್ನು ಎದುರಿಸಲಿದೆ. ಹದಿನಾರನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಮೆಕ್ಸಿಕೋವನ್ನು 3-1 ಗೋಲುಗಳಿಂದ ಸೋಲಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X