ವಿಡಿಯೋ ಆಧ್ಯಾತ್ಮಿಕವಾಗಿ ಹಾನಿ ಮಾಡಿಲ್ಲ: ನಿತ್ಯಾನಂದ

ಅಮಾಯಕ ಹೆಂಗಸರನ್ನು ನಾನು ಲೈಂಗಿಕವಾಗಿ ಶೋಷಿಸುತ್ತೇನೆ ಎಂದು ಮಾಧ್ಯಮಗಳು ನನ್ನ ಮೇಲೆ ಆರೋಪ ಹೊರೆಸಿವೆ. ಆದರೆ, ನನ್ನ ಪ್ರವಚನಗಳಿಗೆ ಸುಮಾರು 23 ಲಕ್ಷ ಮಹಿಳೆಯರು ಈವರೆಗೆ ಬಂದಿದ್ದಾರೆ. ಪ್ರಸ್ತುತ ನನ್ನ ಆಶ್ರಮದಲ್ಲಿ 8 ವರ್ಷದಿಂದ 80 ವಯಸ್ಸಿನ ಮಹಿಳೆಯರು ಇದ್ದಾರೆ. ಆದರೆ, ನನ್ನಿಂದ ಹಾನಿಯಾಗಿದ್ದರೆ, ಈವರೆಗೂ ಯಾವೊಬ್ಬ ಮಹಿಳೆಯೂ ಸಿಐಡಿ ಅವರಿಗೆ ನನ್ನ ವಿರುದ್ಧ ದೂರು ನೀಡಿಲ್ಲವೇಕೆ? ಎಂದು ನಿತ್ಯಾನಂದ ಪ್ರಶ್ನಿಸಿದರು.
ಪ್ರತಿ ದಿನ ನನ್ನ ದರ್ಶನ ಹಾಗೂ ಆಶೀರ್ವಾದ ಬೇಡಿ ಸುಮಾರು 300 ಜನ ಮಹಿಳೆಯರು ಬರುತ್ತಾರೆ. ಇಲ್ಲಿಗೆ ಬರುವ ಮಹಿಳೆಯರು ಶಿಬಿರದ ಸಮಯದಲ್ಲಿ ಬೆತ್ತಲಾಗಲೂ ಸಿದ್ಧ ಎಂಬ ಕರಾರಿಗೆ ಸಹಿ ಹಾಕಬೇಕೆಂಬ ಒತ್ತಾಯವಿದೆ ಎಂಬ ಆರೋಪ ಕೂಡನಿರಾಧಾರ ಎಂದರು.
ಎಲ್ಲರಿಗೂ ಆಧ್ಯಾತ್ಮಿಕತೆ ಬೇಕು: ಕಾಲಾನುಕ್ರಮೇಣ ಸತ್ಯ ಸತ್ವಶಾಲಿಯಾಗಿ ಹೊರಹೊಮ್ಮಲಿದೆ. ದೈನಂದಿನ ಚಟುವಟಿಕೆಗಳಿಂದ ಆಧ್ಯಾತ್ಮಿಕತೆಯನ್ನು ದೂರವಿರಿಸಬೇಕೆಂದು ಎಲ್ಲರ ಭಾವನೆ. ಆದರೆ ಅದು ತಪ್ಪ. ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆ ಅಳವಡಿಕೆಯಿಂದ ಬದುಕು ಪವಿತ್ರವಾಗುತ್ತದೆ ಎಂದರು.












Click it and Unblock the Notifications