ಲೋಕಾಯುಕ್ತರಿಗೆ ಪರಮಾಧಿಕಾರ ಸಿಎಂ ಪುನರುಚ್ಚಾರ
ಬೆಂಗಳೂರು,
ಜೂ. 23: ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಇಂದು ಸಂಜೆ ರಾಜೀನಾಮೆಯನ್ನು ನೀಡುತ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟ ಮಾಹಿತಿ ಬಂದಿಲ್ಲ. ಆದರೂ, ಲೋಕಾಯುಕ್ತರಿಗೆ ಏನೇ ಸಮಸ್ಯೆ ಇದ್ದರೂ ಅವರೊಂದಿಗೆ ಚರ್ಚಿಸಿ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು. id="toptextpromo">ಲೋಕಾಯುಕ್ತರಿಗೆ
ಪರಮಾಧಿಕಾರ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಶೀಘ್ರವೇ ಉಪ ಲೋಕಾಯುಕ್ತರನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಆದರೆ,
ವಿಧಾನಸೌಧ ಖಾಲಿ ಮಾಡಿಸುವೆ ಎಂದಿರುವ ಲೋಕಾಯುಕ್ತರಿಗೆ ಪರಮಾಧಿಕಾರ ಕನ್ನಡಿಯೊಳಗಿನ ಗಂಟು ಎಂಬಂತಾಗಿದೆ. ಕುಮಾರಸ್ವಾಮಿ ಅಧಿಕಾರದಿಂದ ಹಿಡಿದು ಇಲ್ಲಿಯವರೆಗೂ ಬಹುತೇಕ ರಾಜಕೀಯ ಮುಖಂಡರು ಲೋಕಾಯುಕ್ತರಿಗೆ ಪರಮಾಧಿಕಾರ ನೀಡಿಕೆಯ ಪರ ನಿಂತಿದ್ದಾರೆ. ಆದರೆ, ಕಾರ್ಯರೂಪಕ್ಕೆ ತರಲು ಸಂಪುಟದಲ್ಲಿ ಒಮ್ಮತದ ತೀರ್ಮಾನ ಅಸಾಧ್ಯ.











Click it and Unblock the Notifications