ಐವತ್ತೇಳರ ವರನೊಂದಿಗೆ ಅಪ್ರಾಪ್ತ ಬಾಲಕಿ ಮದುವೆ

ರಾಜಮಂಡ್ರಿ ಎಪಿಎಸ್ ಆರ್ ಟಿಸಿ ಘಟಕದಲ್ಲಿ ಮೆಕಾನಿಕಲ್ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಿ ಬಾಲಗಂಗಾಧರ ತಿಲಕ್ (57) ಎಂಬಾತ ಗುಡಿವಾಡ ಜ್ಯೋತಿ (17) ಎಂಬ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ. ರಾಜಮಂಡ್ರಿಯ ಅಯ್ಯಪುರಂನ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಇಬರಿಬ್ಬರ ಮದುವೆ ನಡೆದಿತ್ತು.
ಮದುವೆಯ ಬಳಿಕ ವರನ ಸ್ವಸ್ಥಳ ಕೊವ್ವೂರುಗೆ ವಧುವನ್ನು ಕರೆತರಲಾಗಿತ್ತು. ಇಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪ್ರಶ್ನಿಸಲಾಗಿ ತನಗೆ ಈ ಮದುವೆ ಇಷ್ಟವಿರಲಿಲ್ಲ. ತಮ್ಮ ತಾಯಿ ಹಾಗೂ ಸಂಬಂಧಿಕರು ಬಲವಂತವಾಗಿ ಈ ಮದುವೆಯನ್ನು ಮಾಡಿಸಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದಳು.
ಬಾಲಕಿಯ ಶಾಲಾ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು. ಬಾಲಕಿ ಏಳನೆ ತರಗತಿಗೇ ಶಾಲೆ ಬಿಟ್ಟ ಸಂಗತಿ ಗೊತ್ತಾಗಿದೆ. "ಬಾಲಕಿಯ ವಯಸ್ಸು ಇನ್ನೂ 17 ವರ್ಷ ಎಂದು ದಾಖಲೆಗಳಿಂದ ತಿಳಿಯಿತು. ಬಾಲಕಿಯ ವಯಸ್ಸು 20 ವರ್ಷ ಎಂದು ಸುಳ್ಳು ದಾಖಲೆ ಕೊಟ್ಟ ಗ್ರಾಮ ಕಂದಾಯ ಅಧಿಕಾರಿ ವಿರುದ್ಧಕೇಸು ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications