ಮಂಗಳೂರು; ಕಬ್ಬಿಣ ಅದಿರು ಲಾರಿ ಸಂಚಾರಕ್ಕೆ ಬ್ರೇಕ್

ಜೂನ್ 20ರಿಂದ ನವೆಂಬರ್ 15ರವರೆಗೂ ಐದು ತಿಂಗಳ ಕಾಲ ಈ ಹೆದ್ದಾರಿಗಳಲ್ಲಿ ಲಾರಿಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮಳೆಗಾಲವಾದ ಕಾರಣ ರಸ್ತೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಭಾರಿ ಲಾರಿಗಳ ಸಂಚಾರವನ್ನು ನಿಷೇಧಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದ್ದಾರೆ.
ಜಿಲ್ಲೆಯನ್ನು ಪ್ರವೇಶಿಸಲು ಕಬ್ಬಿಣ ಅದಿರು ಸಾಗಿಸುವ ಲಾರಿಗಳು ಈ ರಾಷ್ಟ್ರೀಯ ಹೆದ್ದಾರಿಗಳನ್ನು ಬಳಸುತ್ತಿವೆ. ಅದಿರು ತುಂಬಿಸಿಕೊಂಡು ಈ ಲಾರಿ ಚಾಲಕರು ಸರಿಯಾಗಿ ರಸ್ತೆ ನಿಯಮಗಳನ್ನು ಪಾಲಿಸುವುದಿಲ್ಲ. ಶಿರಾಡಿ ಘಾಟ್ ರಸ್ತೆಯವರೆಗೂ ಈ ಹೆದ್ದಾರಿ ವಿಸ್ತರಿಸಿದ್ದು ಉಳಿದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ವಿವರ ನೀಡಿದ್ದಾರೆ.
ಮಳೆಗಾಲದ ಕಾರಣ ಭೂಕುಸಿದಂತಹ ಅವಘಡಗಳು ಸಂಭವಿಸುತ್ತಿವೆ. ಇದರಿಂದ ರಸ್ತೆ ಅಪಘಾತಗಳು ಅಧಿಕವಾಗುತ್ತವೆ. ಓವರ್ ಲೋಡ್ ಮಾಡಿದ ಲಾರಿಗಳು ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ ಎಂಬ ಉದ್ದೇಶದಿಂದಲೂ ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications