ಮಂಗಳೂರು ವೈದ್ಯರ ಗಂಟಲು ಮೀನುಗಾರಿಕೆ!
ಮಂಗಳೂರು
ಜೂ 17 : ವ್ಯಕ್ತಿಯೊಬ್ಬನ ಗಂಟಲೊಳಗೆ ಅಕಸ್ಮಾತ್ತಾಗಿ ಜಾರಿಬಿದ್ದ ಮೀನನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಇಲ್ಲಿನ ಮಂಗಳಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. id="toptextpromo">ಅರಬ್
ದೇಶದಲ್ಲಿ ಉದ್ಯೋಗಿಯಾಗಿರುವ ಕೇರಳದ ಕಾಂಜಗಾಡ್ ನ ಮೊಹಮ್ಮದ್ ಕುನ್ನಿ ಎನ್ನುವ ವ್ಯಕ್ತಿ ರಜಾದಿನ ಕಳೆಯಲು ತನ್ನ ಊರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಊರಿನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ . ಒಂದು ಮೀನನ್ನು ಹಿಡಿದು ಅದನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ಇನ್ನೊಂದು ಮೀನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಬಾಯಲ್ಲಿದ್ದ ಮೀನು ಗಂಟಲೊಳಗೆ ಅಕಸ್ಮಾತ್ತಾಗಿ ಜಾರಿ ಬಿತ್ತು. ಘಟನೆ ನಡೆದ ನಾಲ್ಕು ಗಂಟೆಯ ತರುವಾಯ ಆಸ್ಪತ್ರೆಗೆ ವಿಷಮ ಪರಿಸ್ಥಿತಿಯಲ್ಲಿ ಈ ವ್ಯಕ್ತಿಯನ್ನು ದಾಖಲಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಡಾ.
ಅಶೋಕ್ ಶೆಟ್ಟಿ ಮತ್ತು ಡಾ.ಗಣಪತಿ ನೇತ್ರತ್ವದ ವೈದ್ಯರ ತಂಡ ಸುಮಾರು ಒಂದು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ 13 ಸೆಂಟಿಮೀಟರ್ ಉದ್ದದ ಮೀನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ನೆಪ್ರೋಸ್ಕೋಪ್ ಮೂಲಕ ಮೀನನ್ನು ಹೊರ ತೆಗೆಯಲಾಗಿದ್ದು ರೋಗಿ ಈಗ ಗುಣಮುಖ ನಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.











Click it and Unblock the Notifications