ರೇಣುಕಾ ವಿರುದ್ಧ ಪ್ರಮೀಳಾ ನೇಸರ್ಗಿ ಗುಡುಗು

ಪಂಚತಾರಹೋಟೆಲ್‌ಗಳಲ್ಲಿ ರಾತ್ರಿ ಎರಡು ಗಂಟೆವರೆಗೆ ಮದ್ಯಪಾನಕ್ಕೆ ಅವಕಾಶ ನೀಡುವ ಸಚಿವರ ಕ್ರಮ ಸರಿಯಲ್ಲ. ಈಗಾಗಲೇ ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 60 ಜನ ಹೆಣ್ಣುಮಕ್ಕಳು ಕಾಣೆಯಾದ ದೂರು ಬಂದಿವೆ.
ಇಂಥಹ ಘಟನೆಗಳಿಗೆಲ್ಲಾ ಕಾರಣ ಮದ್ಯವೇ ಆಗಿದೆ. ಮದ್ಯದ ಅಮಲಿನಲ್ಲಿ ಅಧಿಕಾರದ ಅಮಲು ಸೇರಿಕೊಂಡರೆ ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮಹಾತ್ಮಾ ಗಾಂಧೀಜಿ ನನಗೆ ಅಧಿಕಾರ ಸಿಕ್ಕಿದರೆ ಮೊದಲು ಮಾಡುವ ಕೆಲಸ ಪಾನ ನಿಷೇಧ ಎಂದಿದ್ದರು. ಅಂಥಹ ಮಹಾತ್ಮರು ಜನಿಸಿದ ದೇಶದಲ್ಲಿ ಮಧ್ಯರಾತ್ರಿವರೆಗೆ ಮದ್ಯಪಾನ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈಗಿರುವ ಸಮಯವನ್ನೇ ಇನ್ನೂ ಎರಡು ಗಂಟೆ ಕಡಿಮೆ ಮಾಡಿದರೆ ನಾವು ಸ್ವಾಗತಿಸುತ್ತೇವೆ.
ಮೊದಲು ಐಷರಾಮಿ ಹೋಟೆಲ್‌ಗಳಲ್ಲಿ ಅನುಷ್ಠಾನಕ್ಕೆ ಬರುವ ಈ ಯೋಜನೆ ಕ್ರಮೇಣ ಎಲ್ಲಾಕಡೆ ವ್ಯಾಪಿಸುತ್ತದೆ. ಇದರಿಂದ ಹೆಣ್ಣು ಮಕ್ಕಳು ತಮ್ಮ ಮಾಂಗಲ್ಯ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ ಎಂದು ಪ್ರಮಿಳಾ ನೇಸರ್ಗಿ ಎಚ್ಚರಿಸಿದರು.
ಮದ್ಯ ಪೂರೈಕೆ ಅವಧಿ ವಿಸ್ತರಣೆಗೆ ಸರ್ಕಾರ ಬ್ರೇಕ್ ಹಾಕಿರುವುದು ಸ್ವಾಗತಾರ್ಹ. ಒಂದು ವೇಳೆ ತೀರ್ಮಾನ ಬದಲಾದರೆ ಮಹಿಳಾ ಸಂಘಟನೆಗಳು ಹೋರಾಟ ನಡೆಸಲಿವೆ ಎಂದೂ ನೇಸರ್ಗಿ ಎಚ್ಚರಿಕೆ ನೀಡಿದರು.












Click it and Unblock the Notifications