ಮಾಗಡಿಹಳ್ಳಿಯಲ್ಲಿ ಸೆರೆಸಿಕ್ಕ ಪುಂಡ ಕಾಡಾನೆ

ಶುಕ್ರವಾರ ಸಂಜೆ 4.30ರ ಸುಮಾರಿಗೆ ಭಾರತಿ ಎಸ್ಟೇಟ್ ಬಳಿ ಮೂರು ಆನೆಗಳು ಜತೆಗೂಡಿ ನಿಂತಿದ್ದನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ತಂಡ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆಗೆ ಮುಮದಾಯಿತು.
4.40ರ ಸುಮಾರಿಗೆ ಆನೆಗೆ ಅರಿವಳಿಕೆ ತುಂಬಿದ್ದ ಚುಚ್ಚುಮದ್ದನ್ನು ಬಂದೂಕು ಮೂಲಕ ಹಾರಿಸುವಲ್ಲಿ ಅರಣ್ಯ ಸಿಬ್ಬಂದಿ ವೆಂಕಟೇಶ್ ಯಶಸ್ವಿಯಾದರು. ಅರಿವಳಿಕೆ ಚುಚ್ಚುಮದ್ದು ಹಾಕುತ್ತಿದ್ದಂತೆ 1/2ಕಿಮೀ ಓಡಿದ 22 ವರ್ಷ 9 ಅಡಿ ಎತ್ತರವಿರುವ ಪುಂಡಾನೆ, ಬಳಿಕ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿಯಿತು. ತಕ್ಷಣವೇ ಅಲ್ಲಿಗೆ ಸಾಕಾನೆಗಳ ಜೊತೆಗೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು. ಪುಂಡಾನೆ ಕಾಲು ಮತ್ತು ಕೊರಳಿಗೆ ಸೆಣಬಿನ ಹಗ್ಗ ಮತ್ತು ಸರಪಳಿಯನ್ನು ಬಿಗಿಯಲಾಯಿತು. ಕಾಡಾನೆ ಸುತ್ತುವರಿದಿದ್ದ ಸಾಕಾನೆಗಳು ಸ್ವಲ್ಪ ಹೊತ್ತಿನ ಬಳಿಕ ಪುಂಡಾನೆಯನ್ನು ಮೇಲೆಬ್ಬಿಸುವಲ್ಲಿ ಯಶಸ್ವಿಯಾದವು.
ರೇಡಿಯೋ ಕಾಲರ್: ಕಳೆದ 2 ವಾರದಿಂದ ನಡೆಯುತ್ತಿರುವ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ 2ನೇ ಪುಂಡಾನೆ ಇದಾಗಿದೆ. ಮೊದಲ ಆನೆಯನ್ನು ಕಳೆದ ವಾರ ಕರಡಿ ಬೆಟ್ಟದ ಬಳಿ ಸೆರೆ ಹಿಡಿಯಲಾಗಿತ್ತು. ಈಗ ಸೆರೆ ಸಿಕ್ಕ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಉಪ ಅರಣ್ಯ ಅಧಿಕಾರಿ ಅಂಬಾಡಿ ಮಾದವ್ ತಿಳಿಸಿದ್ದಾರೆ.
ಮಿತಿಮೀರಿದ ಆನೆ ಉಪಟಳ : ಹಾಸನ ಜಿಲ್ಲೆಯ ಅರಕಲಗೂಡು-ಆಲೂರು-ಸಕಲೇಶಪುರ ತಾಲೂಕಿನ ರೈತರಿಗೆ ಆನೆಗಳ ಕಾಟ ದಶಕಗಳಿಂದ ತಪ್ಪಿದ್ದಲ್ಲ. ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಈ ತಾಲೂಕುಗಳ ಸನಿಹವಿರುವ ದೊಡ್ಡಬೆಟ್ಟ, ಕರಡಿಬೆಟ್ಟ, ಬೈಸೂರು ಅರಣ್ಯ, ಬಾಣಾವರ ಅರಣ್ಯಗಳಿಂದ ಸಾಗಿಬರುವ ಆನೆಗಳು ರೈತರ ಜಮೀನು, ತೋಟಗಳಷ್ಟೇ ಅಲ್ಲ ಜನವಸತಿ ಪ್ರದೇಶದ ಮೇಲೂ ದಾಳಿ ನಡೆಸುತ್ತ ನಿರಾತಂಕವಾಗಿ ಅಡ್ಡಾಡಿಕೊಂಡಿವೆ.
ಕಳೆದ 5 ವರ್ಷಗಳಲ್ಲಿ ಆನೆ ತುಳಿತಕ್ಕೆ ಸಿಲುಕಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ಆನೆಗಳು ಸಹಾ ರೈತರು ಬೇಲಿಗಳಲ್ಲಿ ಹರಿಸುವ ವಿದ್ಯುತ್ ಗೆ ಸಿಲುಕಿ ಪ್ರಾಣ ಕಳೆದುಕೊಂಡಿವೆ. ಆನೆಗಳ ಉಪಟಳವನ್ನು ತಡೆಯಲು ಅರಣ್ಯ ಕಾವಲುಗಾರರ ಜೊತೆಗೆ ಸ್ಥಳೀಯರ ತಂಡವನ್ನು ರಚಿಸುವುದು, ದಡಾಕಿಗಳನ್ನು ಹಾರಿಸುವುದು, ಚಂಡೆ ವಾದ್ಯಗಳನ್ನು ಮೊಳಗಿಸುವುದು ಅರಣ್ಯದ ಲಕ್ಷ್ಮಣರೇಖೆಯಲ್ಲಿ ದೊಡ್ಡ ಕಂದಕಗಳನ್ನು ತೋಡಿಸುವ ಕ್ರಿಯೆ ಜಾರಿಯಲ್ಲಿದೆ. ಸಿಬ್ಬಂದಿ ಕೊರತೆ ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಹಲವು ದಶಕಗಳಿಂದ ಆನೆ ಓಡಿಸುವ ನಾಟಕ ಚಾಲ್ತಿಯಲ್ಲಿದೆ.
ಈ ಭಾಗದಲ್ಲಿ ನಡೆಯುವ ಕಳ್ಳಭಟ್ಟಿ ದಂಧೆಯ ರುಚಿ ಹಿಡಿದಿದ್ದ ಕಾಡಾನೆಗಳು ಕಳ್ಳಭಟ್ಟಿ ಕುಡಿದು ಗಲಾಟೆ ಮಾಡಿದ ಘಟನೆಗಳು ಹಸಿರಾಗಿವೆ. ಈಗೀಗ ಆನೆಗಳ ಉಪಟಳದಿಂದ ಕಳ್ಳಭಟ್ಟಿಕೋರರು ಸಹ ಭಟ್ಟಿ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಅಷ್ಟರ ಮಟ್ಟಿಗೆ ಜನರು ನೆಮ್ಮದಿ ಪಡುವಂತಾಗಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications