ಬಿದರಿ ರೇಣುಕಾ 'ಮದ್ಯ'ದ ಬಿರುಕಿಗೆ ತೇಪೆ

Renukacharya
ಬೆಂಗಳೂರು, ಜೂ.14: ನಗರದಲ್ಲಿ ಮದ್ಯ ಪೂರೈಕೆ ಅವಧಿ ವಿಸ್ತರಣೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹಾಗೂ ಅಬಕಾರಿ ಸಚಿವ ರೇಣುಕಾಚಾರ್ಯ ನಡುವೆ ನಡೆದಿದ್ದ ವಾಗ್ಸಮರಕ್ಕೆ ಗೃಹ ಸಚಿವ ವಿಎಸ್ ಆಚಾರ್ಯ ಇಂದು ವಿರಾಮ ಘೋಷಿಸಿದ್ದಾರೆ.

ಪಂಚತಾರಾ ಹೋಟೆಲ್‌, ಬಾರ್ ಅಂಡ್ ರೆಸ್ಟೋರೆಂಟ್ ಇತ್ಯಾದಿ ಇತ್ಯಾದಿ ಸ್ಥಳಗಳಲ್ಲಿ ಮದ್ಯ ಸರಬರಾಜು ಮಾಡುವ ಅವಧಿಯನ್ನು ವಿಸ್ತರಣೆ ಸದ್ಯಕ್ಕೆ ಇಲ್ಲ. ಸುರಕ್ಷತೆ ದೃಷ್ಟಿಯಿಂದ ಈಗ ನಿಗದಿ ಮಾಡಿರುವ ಸಮಯವನ್ನು ಮುಂದುವರೆಸುವುದಾಗಿ ಆಚಾರ್ಯ ಸುದ್ದಿಗಾರರಿಗೆ ಹೇಳಿದ್ದಾರೆ.

ನಗರದ ಸ್ಟಾರ್ ಹೋಟೆಲ್ ಗಳಲ್ಲದೆ ಮೈಸೂರು, ಹುಬ್ಬಳ್ಳಿ, ಮಂಗಳೂರು ಮುಂತಾದ ನಗರ ಗಳಲ್ಲಿ ಮಧ್ಯರಾತ್ರಿಯ ನಂತರ ಎರಡು ಗಂಟೆ ಹೆಚ್ಚುವರಿ ಅವಧಿ ಮದ್ಯ ಪೂರೈಕೆಗೆ ಬೇಡಿಕೆ ಹೆಚ್ಚಾಗಿದೆ ಈ ಬಗ್ಗೆ ಪರಿಶೀಲಿಸಿ ಆದೇಶ ನೀಡಲಾಗುವುದು ಎಂದು ರೇಣುಕಾಚಾರ್ಯ ಹೇಳಿದ್ದರು.

ಆದರೆ, ಸಚಿವರ ಹೇಳಿಕೆಯನ್ನು ಬಿದರಿ ವಿರೋಧಿಸಿ, ಈ ನಿಗದಿತ ಸಮಯ 11.30ಕ್ಕೆ ಎಲ್ಲಾ ಬಂದ್ ಮಾಡಿಸುವುದಾಗಿ ಹೇಳಿದ್ದರು. ಸಾರ್ವಜನಿಕರ ಸುರಕ್ಷತೆ ಪೊಲೀಸ್ ಇಲಾಖೆ ಕರ್ತವ್ಯ ಎಂದಿದ್ದರು. ಜೂ.18ರಂದು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ನಗರ ಪೊಲೀಸ್ ಅಧಿಕಾರಿಗಳ ಸಭೆ ನಡೆಯುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+