ಉಡುಪಿ ಎಸ್ ಬಿಐ ಎಟಿಎಂ ಕಣ್ಮರೆ

ಉಡುಪಿಯ ಕೋರ್ಟ್ ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಅನ್ನು ಕಳ್ಳರು ಹೊತ್ತ್ತೊಯ್ದಿದ್ದಾರೆ. ಜೂನ್ 4 ರಂದು ಎನ್ ಆರ್ ಐ ಖಾತೆವುಳ್ಳವರಿಗೆ ಅನುಕೂಲವಾಗಲೆಂದು ಎಟಿಎಂ ಅನ್ನು ಸ್ಥಾಪಿಸಲಾಗಿತ್ತು.
ನೋ ಸೆಕ್ಯುರಿಟಿ: ಎಸ್ ಬಿಐ ಎಟಿಎಂ ಕಾವಲಿಗೆ ಯಾವುದೇ ಸಿಬ್ಬಂದಿಯನ್ನು ಬ್ಯಾಂಕ್ ನವರು ನೇಮಿಸಿರಲಿಲ್ಲ. ಎಟಿಎಂ ಕೇಂದ್ರ ಆರಂಭಿಸಿ, ಒಂದು ವಾರದೊಳಗೆ ಈ ದುಷ್ಕೃತ್ಯ ನಡೆದಿದೆ. ಯಾವುದೇ ರೀತಿ ಸುರಕ್ಷತಾ ನಿಯಮಗಳನ್ನು ಪಾಲಿಸದೆ, ಪೊಲೀಸರ ಎಚ್ಚರಿಕೆ ಮಾತುಗಳನ್ನು ಉಪೇಕ್ಷಿಸಿದ್ದಕ್ಕೆ ಬೆಲೆ ತೆರಬೇಕಾಗಿದೆ.
ಕಳೆದ ರಾತ್ರಿ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ. ಸುಮಾರು 15 ಲಕ್ಷ ರು ಎಟಿಎಂ ನಲ್ಲಿ ಇಡಲಾಗಿತ್ತು.ಎಟಿಎಂ ಕೇಂದ್ರದಲ್ಲಿ ಸಿಸಿಟಿವಿ ಕೂಡಾ ಅಳವಡಿಸಿಲ್ಲ. ಭದ್ರತಾ ಸಿಬ್ಬಂದಿ ಇರಲಿಲ್ಲ. ಬ್ಯಾಂಕ್ ಆಡಳಿತ ಮಂಡಳಿ ನಿರ್ಲಕ್ಷ್ಯವೆ ಕಾರಣ. ಡಿಎಸ್ಪಿ ಜಯಂತ್ ಶೆಟ್ಟಿ ನೇತೃತ್ವದ ತಂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications