ರಸ್ತೆ ಮಧ್ಯದಲ್ಲೇ ಶಿಕ್ಷಕಿಯ ಕಗ್ಗೊಲೆ

ಈ ಪ್ರಕರಣದಲ್ಲಿ ಮೃತ ರಮ್ಯಾರನ್ನು ಆಕೆಯೇ ಪತಿ ವಿಲಿಯಮ್ಸ್ ತನ್ನ ಸೋದರನ ನೆರವಿನಿಂದ ಭೀಕರವಾಗಿ ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಾಲೆ ಮುಗಿಸಿ ಹಿಂದಿರುಗುತ್ತಿದ್ದ ರಮ್ಯಾ ಟ್ರಿನಿಟಿ ವೃತ್ತದ ಬಳಿ ಸಹೋದ್ಯೋಗಿಗಳ ಜೊತೆ ತಂಪು ಪಾನೀಯ ಕುಡಿಯುತ್ತಿದ್ದಾಗ, ಬೈಕಿನಿಂದ ಬಂದ ವಿಲಿಯಮ್ಸ್, ಆಕೆಯನ್ನು ಐದಾರು ಅಡಿಗಳಷ್ಟು ದೂರ ಎಳೆದೊಯ್ದು ಇರಿದು ಕೊಂದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹೊಟ್ಟೆ, ಕುತ್ತಿಗೆ ಹಾಗೂ ಕೈ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮ್ಯಾರನ್ನು ತಕ್ಷಣ ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದರಾದರೂ, ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಶಿಕ್ಷಕಿ ರಮ್ಯಾಳಿಂದ ದೂರವಿದ್ದ ಪತಿ, ಎರಡು ವರ್ಷದ ಗಂಡು ಮಗು ಸಾಕುವ ವಿಚಾರದಲ್ಲಿ ಜಗಳ ಮಾಡಿದ್ದನು.ಅಲ್ಲದೆ, ಪತ್ನಿ ರಮ್ಯಾಳ ನಡತೆ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ ವಿಲಿಯಮ್ಸ್,ದಿನನಿತ್ಯ ಜಗಳವಾಡುತ್ತಿದ್ದ. ಇಬ್ಬರೂ ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.











Click it and Unblock the Notifications