ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಸರ್ಚ್ ನಮ್ಮ ಬೆಂಗಳೂರು ಟಾಪ್

By Mahesh
|
Google Oneindia Kannada News

Bangalore tops google search FIFA World Cup 2010
ಬೆಂಗಳೂರು, ಜೂ.9: ಫೀಫಾ ವಿಶ್ವಕಪ್ 2010 ಆರಂಭಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇರುವಂತೆಯೇ ಬೆಂಗಳೂರಿನ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ಗೂಗಲ್ ಸಂಸ್ಥೆ ಕೊಟ್ಟಿದೆ. ವಿಶ್ವಕಪ್ ಸಂಬಂಧಿತ ಹುಡುಕುವಿಕೆ(ಸರ್ಚಿಂಗ್) ಯಲ್ಲಿ ನಮ್ಮ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಅಚ್ಚರಿ ಎಂದರೆ, ಕರ್ನಾಟಕ ಕೂಡ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿದೆ.

ಸರ್ಚಿಂಗ್ ಟ್ರೆಂಡ್ ಪತ್ತೆ ಹಚ್ಚಲು ಗೂಗಲ್ ಇನ್ ಸೈಟ್ಸ್ ಎಂಬ ಸಾಧನವನ್ನು ಬಳಸಿ ಗೂಗಲ್ ಟಾಪ್ ಟ್ರೆಂಡ್ ಹಾಗೂ ಟಾಪ್ ಸರ್ಚ್ ಮಾಡಿರುವ ನಗರ, ರಾಜ್ಯಗಳನ್ನು ಯಾವುದು ಎಂದು ತಿಳಿಯುತ್ತದೆ.

ಫೀಫಾ ವಿಶ್ವಕಪ್ 2010 :
ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ

ಭಾರತ ಕೂಡ ವಿಶ್ವಕಪ್ ಬಗ್ಗೆ ಅತಿ ಹೆಚ್ಚು ಹುಡುಕುವ ದೇಶಗಳಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಡೋನೇಷಿಯಾ ಮೊದಲೆರಡು ಸ್ಥಾನದಲ್ಲಿವೆ. ಯುರೋಪಿಯನ್ ರಾಷ್ಟ್ರಗಳು ನಂತರದ ಸ್ಥಾನದಲ್ಲಿದೆ ಎಂದು ಗೂಗಲ್ ಪ್ರಕಟಿಸಿದೆ.

'World Cup 2010", 'FIFA 2010 schedule", 'FIFA tickets", 'K"Naan"s Wavin Flag", 'Shakira"s Waka Waka song" 'FIFA teams" and 'FIFA players" ಇವು ಭಾರತೀಯರು ಅತಿ ಹೆಚ್ಚು ಹುಡುಕಾಡಲ್ಪಟ್ಟ್ಟ ಕೀ ಪದಗಳಾಗಿವೆ.

2009 ಕ್ಕೆ ಹೋಲಿಸಿದರೆ ಭಾರತದಲ್ಲಿ ಫುಟ್ಬಾಲ್ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ದ್ವಿಗುಣವಾಗಿದೆ. ಯುವ ಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಮುಂಬೈ, ದೆಹಲಿ ಹಾಗೂ ಮಹಪೆ (ಮಹಾರಾಷ್ಟ್ರ) ಇದೆ.

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ

ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ ತಮಿಳುನಾಡು, ದೆಹಲಿ ಹಾಗೂ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿವೆ. ಆದರೆ, ಅಚ್ಚರಿಯ ವಿಷಯವೆಂದರೆ, ಫುಟ್ಬಾಲ್ ಕ್ರೇಜಿ ರಾಜ್ಯಗಳೆಂದು ಗುರುತಿಸಲ್ಪಡುವ ಕೇರಳ, ಪಶ್ಚಿಮ ಬಂಗಾಲ ಹಾಗೂ ಗೋವಾ ಮೊದಲ ಮೂರು ಸ್ಥಾನಕ್ಕೇರಲು ವಿಫಲವಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X