ನಾನು ಮಾವೋವಾದಿಗಳ ಪರ; ಬೇಕಿದ್ದರೆ ಜೈಲಿಗೆ ಹಾಕಿ
ಮುಂಬೈ,
ಜೂ.4: ನಾನು ಮಾವೋವಾದಿಗಳ ಪರ, ಬೇಕಿದ್ದರೆ ನನ್ನನ್ನು ಬಂಧಿಸಿ ಜೈಲಿಗೆ ಹಾಕಿ ಎಂದು ಬುಕರ್ ಪ್ರಶಸ್ತಿ ವಿಜೇತ ಲೇಖಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಅರುಂಧತಿ ರಾಯ್ ಹೇಳಿದ್ದಾರೆ. ತಮ್ಮನ್ನು ಜೈಲಿಗೆ ತಳ್ಳಿದರೂ ಮಾವೋವಾದಿಗಳ ಶಸ್ತ್ರಾಸ್ತ್ರ ಹೋರಾಟವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. id="toptextpromo">ಪ್ರಜಾತಾಂತ್ರಿಕ
ಹಕ್ಕುಗಳ ರಕ್ಷಣೆ ಸಮಿತಿ ಆಯೋಜಿಸಿದ್ದ 'ಜನರ ಮೇಲೆ ಯುದ್ಧ' ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಾಂಧಿ ಮಾರ್ಗ ಸೂಕ್ತವಲ್ಲ. ಆದರೆ ದಂತೆವಾಡದಲ್ಲಿ 76 ಮಂದಿ ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿದ್ದನ್ನು ನಾನು ಸಮರ್ಥಿಸುವುದಿಲ್ಲ. ಹಿಂಸಾಚಾರಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಾಕೃತಿಕ
ಸಂಪನ್ಮೂಲಗಳಾದ ನೀರು, ಖನಿಜ, ಅರಣ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಆದಿವಾಸಿಗಳು ಮತ್ತು ಹಣಬಲವುಳ್ಳವರ ನಡುವಿನ ಸಂಘರ್ಷವೆ ನಕ್ಸಲ್ ಹಿಂಸಾಚಾರ ಎಂದು ಅರುಂಧತಿ ರಾಯ್ ಬಣ್ಣಿಸಿದ್ದಾರೆ. ಶೇ.99 ಮಂದಿ ಆದಿವಾಸಿಗಳು ಮಾವೋವಾದಿಗಳಲ್ಲ. ಶೇ.99 ಮಾವೋವಾದಿಗಳು ಆದಿವಾಸಿಗಳಲ್ಲ ಎಂದಿದ್ದಾರೆ.











Click it and Unblock the Notifications