ಕುಡಿದು ಗಾಡಿ ಓಡಿಸಿದ 8 ಪೈಲಟ್ಟುಗಳು ವಜಾ

ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿದಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ವಿಮಾನ ಚಾಲನೆ ನಿಯಮಗಳನ್ನು ಉಲ್ಲಂಘಿಸಿದ ಇಂಥ ಎಂಟು ಮದಿ ಪೈಲೆಟ್ಟುಗಳನ್ನು ಕಳೆದ ವರ್ಷ ಮನೆಗೆ ಕಳಿಸಲಾಗಿದೆ. ಮದ್ಯ ಸೇವಿಸಿ ವಿಮಾನ ಚಲಿಸಿರುವ ಆಪಾದನೆಯ ಮೇರೆಗೆ ಒಟ್ಟು 42 ಮಂದಿ ಪೈಲಟ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 21 ಮಂದಿ ಮದ್ಯ ಸೇವಿಸಿರುವುದು ದೃಢಪಟ್ಟಿತ್ತು. ಇವರ ಪೈಕಿ ಎಂಟು ಮಂದಿಯನ್ನು ಸೇವೆಯಿಂದ ವಜಾ ಮಾಡಿ ಉಳಿದವರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಆದರೆ, ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದ ಇನ್ನೂ 28 ಮಂದಿ ಪೈಲಟ್ ಗಳ ವಿರುದ್ಧ ಡಿಜಿಸಿಎ ಯಾವುದೇ ಕ್ರಮ ಕೈಗೊಂಡಿಲ್ಲ. ತಾವು ಕೇಳಿದ ಮಾಹಿತಿ ಬಗ್ಗೆ ಡಿಜಿಸಿಎ ಕರರುವಾಕ್ಕು ಮಾಹಿತಿ ನೀಡಿಲ್ಲ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದ ಅಭಿಷೇಕ್ ಶುಕ್ಲಾ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದು ಪೆಗ್ ಕುಡಿದು ದ್ವಿಚಕ್ರ ವಾಹನ ಓಡಿಸಿದರೆ ಪೊಲೀಸರು ಬೆನ್ನಟ್ಟಿಕೊಂಡು ಬಂದು ಬೆಂಡು ಎತ್ತುತ್ತಾರೆ. ಅಂಥದ್ದರಲ್ಲಿ ಸಾವಿರ ಕೋಟಿ ಬೆಲೆಬಾಳುವ ಏರ್ ಕ್ರಾಫ್ಟ್ ಗಳಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗುವ ಪೈಲಟ್ಟುಗಳು ಡ್ರಂಕನ್ ಡ್ರೈವಿಂಗ್ ಆಪಾದನೆಯಿಂದ ಬಚಾವಾಗುತ್ತಾರೆಂದರೆ ಆಶ್ಚರ್ಯವೇ ಆಗುತ್ತದೆ.












Click it and Unblock the Notifications