ಮಳೆ ಅಬ್ಬರಕ್ಕೆ ಬಲಿಯಾದ ವಿದ್ಯಾರ್ಥಿನಿ

ಸಂಜನಾ ಸಿಂಗ್ ಎಂದಿನಂತೆ ಟ್ಯೂಷನ್‌ಗೆ ತೆರಳಿದ್ದ ಳು. ಸಂಜೆ 6.30ರ ಸುಮಾರಿಗೆ ಜೋರಾಗಿ ಮಳೆ ಸುರಿದ ಕಾರಣ, ಮಳೆಯಿಂದ ರಕ್ಷಿಸಿಕೊಳ್ಳಲು ಪಶುವೈದ್ಯ ಕಾಲೇಜ್ ಕಾಂಪೌಂಡ್ ಬಳಿ ನಿಂತಿದ್ದಳು. ಆಗ ಗೋಡೆ ಕುಸಿದ ಪರಿಣಾಮ ಮಣ್ಣಿನಡಿ ಸಂಜನಾ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸತೊಡಗಿದಳು. ಗೋಡೆ ಕುಸಿದ ಮೇಲೆ ತನ್ನ ತಾಯಿಗೆ ಮೊಬೈಲ್ ಕರೆ ಮಾಡಲು ವಿಫಲ ಪ್ರಯತ್ನ ಸಂಜನಾ ನೀಡಿಸಿದ್ದರು ಎನ್ನಲಾಗಿದೆ.
ಇದನ್ನು ನೋಡಿದ ಸಾರ್ವಜನಿಕರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದರು. ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮಣ್ಣನನ್ನು ತೆಗೆದರು. ಆದರೆ, ಆಕೆಯನ್ನು ಸಮೀಪದ ಬಾಪ್ಟಿಸ್ಟ್ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಳು.
ಹಲವೆಡೆ ಭರ್ಜರಿ ಮಳೆ: ನಗರದ ಬಹುತೇಕ ಬಡಾವಣೆಗಳಲ್ಲಿ ಮಂಗಳವಾರ ಸಂಜೆ ಗಾಳಿಯಿಂದ ಕೂಡಿದ ಭಾರಿ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ಮರಗಳು ಉರುಳಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಹೆಬ್ಬಾಳದಲ್ಲಿ ಮತ್ತೊಂದು ಗೋಡೆ ಕುಸಿದಿದೆ. ಶಿವಾಜಿನಗರ, ಜೆಪಿ ನಗರ, ಮಲ್ಲೇಶ್ವರ, ಜಯನಗರ, ಕನಕಪುರ ರಸ್ತೆ, ಎಂಜಿ ರಸ್ತೆ, ವಿಜಯನಗರ, ಗಿರಿನಗರ, ಹಲಸೂರು, ಮತ್ತಿಕೆರೆ ಮುಂತಾದೆಡೆ ಭರ್ಜರಿ ಮಳೆ ಬಿದ್ದಿದೆ.
ಲಿಂಗರಾಜಪುರ, ಮಾರುತಿ ಸೇವಾನಗರ, ಪಿಳ್ಳಣ್ಣಗಾರ್ಡನ್, ಕಾಕ್ಸ್‌ಟೌನ್, ಬಸವೇಶ್ವರ ನಗರ, ಆರ್.ಪಿ.ಸಿ.ಲೇಔಟ್, ಕೋರಮಂಗಲ, ಕಾಡುಗೋಡಿ, ವೈಟ್ ಫೀಲ್ಡ್, ಮಹದೇವಪುರ, ಯಶವಂತಪುರ ಮತ್ತಿತರ ಕಡೆ ಮರದ ಕೊಂಬೆಗಳು ಉರುಳಿ ಬಿದ್ದು,ಕೆಲ ಕಾರು, ದ್ವಿಚಕ್ರವಾಹನಗಳು ಜಖಂಗೊಂಡಿವೆ.












Click it and Unblock the Notifications