ಕೊಹಿನೂರು ವಜ್ರ ವಾಪಸ್ ಮಾಡಿ
ಲಂಡನ್,
ಜೂ.2: ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ದೇಶದಿಂದ ಹೊರಕ್ಕೊಯ್ಯಲ್ಪಟ್ಟ ಅಪೂರ್ವ ಕೊಹಿನೂರು ವಜ್ರ, ಸುಲ್ತಾನ್‌ಗಂಜ್ ಬುದ್ಧ ಸೇರಿದಂತೆ ಬೆಲೆ ಕಟ್ಟಲಾಗದಂತಹ ಅಮೂಲ್ಯ ವಸ್ತುಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಅಂತಾರಾಷ್ಟ್ರೀಯ ಜಾಲವೊಂದರ ಮೂಲಕ ಪ್ರಯತ್ನ ಆರಂಭಿಸಲಾಗಿದೆ. id="toptextpromo">ವಿದೇಶಗಳಲ್ಲಿರುವ
ಭಾರತೀಯ ಸಂಪತ್ತಿನ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಮರಳಿ ಪಡೆಯುವುದಕ್ಕಾಗಿ ರಾಜತಾಂತ್ರಿಕ ಹಾಗೂ ಕಾನೂನು ಅಭಿಯಾನವೊಂದನ್ನು ನಡೆಸಬೇಕಾದ ಅಗತ್ಯವನ್ನು ಎಎಸ್‌ಐಯ ಮಹಾನಿರ್ದೇಶಕ ಗೌತಮ್ ಸೇನ್‌ಗುಪ್ತ ಒತ್ತಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಶೇಷವಾಗಿ
ಬ್ರಿಟಿಷ್ ಮ್ಯೂಸಿಯಂ, ದ ರಾಯಲ್ ಕಲೆಕ್ಷನ್, ಬರ್ಮಿಂಗ್‌ಹಾಮ್ ಮ್ಯೂಸಿಯಂ, ಆರ್ಟ್ ಗ್ಯಾಲರಿಗಳಲ್ಲಿ ಭಾರತದ ಅನೇಕ ಅಮೂಲ್ಯ ವಸ್ತುಗಳು ಇವೆ. ಕಳೆದ ಹಲವು ವರ್ಷಗಳಿಂದ ಭಾರತ ನಡೆಸುತ್ತಿರುವ ಪ್ರಯತ್ನ ನಿರೀಕ್ಷಿತ ಫಲ ನೀಡದ ಕಾರಣ ಇದೀಗ ಯುನೆಸ್ಕೋದ ಜೊತೆ ಕೈಜೋಡಿಸಿ ಈ ನಿಟ್ಟಿನಲ್ಲಿ ಶ್ರಮಿಸಲು ಎಎಸ್‌ಐ ನಿರ್ಧರಿಸಿದೆ.











Click it and Unblock the Notifications