ಮಾಜಿ ಜ್ಯೋತಿಷಿ ಹಾಲಿ ಕಾರುಕಳ್ಳ ಬಲೆಗೆ

Astrologer turned Car thief held in Indiranagar
ಬೆಂಗಳೂರು, ಜೂ.2: ಐಷಾರಾಮಿ ಜೀವನದ ಹಿಂದೆ ಬಿದ್ದ ಮಾಜಿ ಜ್ಯೋತಿಷಿಹಾಲಿ ಕಾರು ಕಳ್ಳ ಶ್ರೀ ಹರಿ ರೆಡ್ದಿ ಅಲಿಯಾಸ್ ರಾಜೇಶ್ (36) ನನ್ನು ಇಂದಿರಾನಗರ ಪೊಲೀಸರು ಸೆರೆ ಹಿಡಿದು, ಸುಮಾರು 31 ಲಕ್ಷ ಬೆಲೆಯ ಟಯೋಟಾ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಹಾಲಿ ಕಳ್ಳನ ಹಿನ್ನೆಲೆ:ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಶ್ರೀ ಹರಿ ರೆಡ್ದಿ, ಬೆಂಗಳೂರಿಗೆ ಉದ್ಯೋಗ ಅರಸಿ ಬಂದವ. ಮೊದಮೊದಲು ಪೌಲ್ಟ್ರಿ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ . ಆದರೆ, ಐಷಾರಾಮಿ ಜೀವನವನ್ನು ಅರಸಿ ಹೊರಟು ವಾಸ್ತು ಶಾಸ್ತ್ರ, ಜ್ಯೋತಿಷ್ಯ ಹೇಳುವ ಕಸುಬು ರೂಢಿಸಿಕೊಂಡ. ಆದರೆ, ಅದು ಕೂಡ ಬೋರ್ ಆದ ತಕ್ಷಣ, ವಿಜಯನಗರದ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿದ .

ಡ್ರೈವರ್ ಕೆಲಸ ಮಾಡುತ್ತಾ ಮಾಡುತ್ತಾ, ಐಷಾರಾಮಿ ಕಾರುಗಳ ಕೀ ಎಗರಿಸುವ ಕಲೆ ಕಲಿತ. ಕೆಲ ದಿನಗಳ ಹಿಂದೆ ಮಾಜಿ ಸಚಿವ ಟಿ.ಜಾನ್‌ರ ಪುತ್ರ ಬಿಜು ಅವರ ಬಳಿ ಡ್ರೈವರ್ ಕೆಲಸಕ್ಕೆ ಸೇರಿಕೊಂಡ. ಸಮಯ ಸಿಕ್ಕಾಗ ಕಾರಿನ ಕೀ ಕಳವು ಮಾಡಿ ಇಂದಿರಾನಗರದ ಅವರ ಮನೆ ಮುಂದೆ ನಿಲ್ಲಿಸಿದ್ದ ಟಯೋಟಾ ಫಾರ್ಚೂನರ್ ಕಾರನ್ನು ಕಳವು ಮಾಡಿದ್ದ.

ಮೋಜಿಗಾಗಿ ಕಾರು ಕಳ್ಳತನ:
ಎಚ್‌ಎಸ್‌ಆರ್ ಬಡಾವಣೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಟಯೋಟಾ ಇನ್ನೋವಾ ಕಾರನ್ನು ಕಳವು ಮಾಡಿ ಕಾರಿನ ಸಂಖ್ಯಾಫಲಕ (ನಂಬರ್‌ಪ್ಲೇಟ್) ಬದಲಾಯಿಸಿ ಮೋಜಿನ ಜೀವನ ನಡೆಸುತ್ತಿದ್ದ.

ಖಚಿತ ಸುಳಿವಿನ ಮೇರೆಗೆ ಪೂರ್ವ ವಿಭಾಗದ ಡಿಸಿಪಿ ಚಂದ್ರಶೇಖರ್ ಹಾಗೂ ಹಲಸೂರು ಉಪವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇಂದಿರಾನಗರ ಪೊಲೀಸ್ ನಿರೀಕ್ಷಕ ಕಿಶೋರ್ ಭರಣಿ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+