ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರಧಾಮ ಹತ್ಯಾಕಾಂಡ ಆರೋಪಿಗಳಿಗೆ ಶಿಕ್ಷೆ

By Mahesh
|
Google Oneindia Kannada News

Akshardham Temple
ಅಹಮದಾಬಾದ್, ಜೂ. 1: 2002 ರಲ್ಲಿ ನಡೆದ ಅಕ್ಷರಧಾಮ ದೇಗುಲದ ಮೇಲಿನ ದಾಳಿ ಹತ್ಯಾಕಾಂಡ ಪ್ರಕರಣದ ಮೂರು ಪ್ರಮುಖ ಆರೋಪಿಗಳಿಗೆ ಗುಜರಾತ್ ಹೈ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಂದು ನಡೆದ ಉಗ್ರರ ದಾಳಿಗೆ 32 ಜನ ಅಮಾಯಕರು ಬಲಿಯಾಗಿದ್ದರು.

ಅಕ್ಷರಧಾಮ ದೇಗುಲ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅದಂ ಅಜ್ಮೇರಿ, ಶಾನ್ ಮಿಯಾ ಅಲಿಯಾಸ್ ಚಾಂದ್ ಖಾನ್ ಬರೇಲಿ ಹಾಗೂ ಮುಫ್ತಿ ಅಬ್ದುಲ್ ಖಯ್ಯಾ ಮನ್ಸೂರಿ ಸೇರಿದಂತೆ ಒಟ್ಟು ಆರು ಜನರನ್ನು ತಪ್ಪಿತಸ್ಥರು ಎಂದು 2006ರಲ್ಲಿ ಕೆಳಸ್ತರದ ನ್ಯಾಯಲಯವು ಘೋಷಿಸಿತ್ತು.

2006 ರ ತೀರ್ಪನ್ನು ಎತ್ತಿ ಹಿಡಿದ ಗುಜರಾತ್ ಹೈ ಕೋರ್ಟ್ ಇಬ್ಬರು ಆರೋಪಿಗಳಿಗೆ ಮರಣದಂಡನೆ ಹಾಗೂ ಒಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳು ಮರಣ ದಂಡನೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. 2008 ರಲ್ಲೇ ವಾದ ವಿವಾದಗಳನ್ನು ಪೂರೈಸಿದ್ದ ಹೈ ಕೋರ್ಟ್ ತೀರ್ಪನ್ನು ಇಲ್ಲಿಯವರೆಗೂ ಕಾಯ್ದಿರಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X