ಅದು ಗುರೂಜಿ ಮೇಲೆ ಹಾರಿಸಿದ ಗುಂಡಲ್ಲ: ಚಿದು

.32 ಎಂಎಂ ಪಿಸ್ತೂಲು ಬಳಸಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವಿನಯ್ ಅವರಿದ್ದ ಸ್ಥಳದಿಂದ ಸುಮಾರು 700 ಅಡಿ ದೂರದಿಂದ ಗುಂಡು ಹಾರಿರುವ ಸಾಧ್ಯತೆಯಿದೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಯಾರು ನೋಡಿಲ್ಲ.ಮೇಲ್ನೋಟಕ್ಕೆ ಇದು ಗುರೂಜಿ ಅನುಯಾಯಿಗಳ ಒಳಜಗಳ ಎಂದು ಕಂಡು ಬರುತ್ತದೆ ಎಂದು ಚಿದಂಬರಂ ಹೇಳಿದರು.
ಕರ್ನಾಟಕ ರಾಜ್ಯ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಗುರೂಜಿಗೆ ಹಾಗೂ ಆಶ್ರಮಕ್ಕೆ ವೈ ದರ್ಜೆಯ ಭದ್ರತೆ ಒದಗಿಸಲಾಗಿದ್ದು, ಕೇಂದ್ರ ಭದ್ರತಾ ಪಡೆ ಕರೆಸುವ ಅಗತ್ಯವಿಲ್ಲ ಎಂದರು.
ಗುರೂಜಿ ಅವರ ಹೇಳಿಕೆ ಪ್ರಕಾರ ಘಟನೆ ನಡೆದಿದ್ದು, ಸಂಜೆ 6 ಗಂಟೆ ನಂತರ, ಆದರೆ ಆಶ್ರಮದವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು 9 ಗಂಟೆ ಸುಮಾರಿಗೆ , ಈ ವಿಳಂಬಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದರು.
ವಿಡಿಯೋಗಳು:
ಇಂಥ ದಾಳಿಗಳಿಗೆ ಅಂಜುವವನು ನಾನಲ್ಲ:ಶ್ರೀಶ್ರೀ
ಗುಂಡು ಹಾರಿಸಿದವನನ್ನು ನಾನು ಕ್ಷಮಿಸಿದ್ದೇನೆ: ಶ್ರೀಶ್ರೀ












Click it and Unblock the Notifications