ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 3 ಮತ್ತು 4 ಕ್ಕೆ ವಿಶ್ವ ಹೂಡಿಕೆದಾರರ ಸಮಾವೇಶ

By Mrutyunjaya Kalmat
|
Google Oneindia Kannada News

Murugesh Nirani
ಬೆಂಗಳೂರು, ಮೇ. 29 : ಜೂನ್ ಮೂರು ಮತ್ತು ನಾಲ್ಕರಂದು ಎರಡು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ವಿಶ್ವ ಹೂಡಿಕೆದಾರ ಸಮಾವೇಶವನ್ನು ಸರಕಾರ ಆಯೋಜಿಸಿದೆ. ರಾಜ್ಯದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದಲ್ಲಿ ಬಂಡವಾಳ ಹೂಡುವ ಕಂಪನಿಗಳು, ಉದ್ಯಮಿದಾರರಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಸಮಾವೇಶಕ್ಕೆ ಜಾಗತಿಕ ಮಟ್ಟದಿಂದ ಅನೇಕ ಉದ್ಯಮಿಗಳು, ಕಂಪನಿಗಳು ಆಗಮಿಸುತ್ತಿರುವುದರಿಂದ ಅರಮನೆ ಮೈದಾನವನ್ನು ಶೃಂಗಾರಗೊಳಿಸಲಾಗಿದೆ. ಅಲ್ಲದೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ನಡೆಸುತ್ತಿರುವ ವಿಶ್ವ ಹೂಡಿಕೆದಾರರ ಸಮಾವೇಶಕ್ಕೆ ವ್ಯಾಪಕ ಪ್ರಚಾರ ನೀಡಲಾಗಿದ್ದು, ಬೆಂಗಳೂರಿನಲ್ಲಿ ಯಡಿಯೂರಪ್ಪ ಮತ್ತು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ಪ್ಲೆಕ್ಸ್, ಬಂಟಿಂಗ್, ಬ್ಯಾನರ್ ಗಳು ಎಗ್ಗಿಲ್ಲದೆ ಹಾರಾಡತೊಡಗಿವೆ. ಅರಮನೆ ಮೈದಾನದ ಸುತ್ತಮುತ್ತ ಇರುವ ರಸ್ತೆಗಳ ಫಳಫಳಿಸತೊಡಗಿವೆ.

ಸಮಾವೇಶದದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಯೋಜಿಸಿರುವ ಸರಕಾರ, ಏರೋಸ್ಪೇಸ್, ರಿಯಲ್ ಎಸ್ಟೇಟ್, ಪ್ರವಾಸೋಧ್ಯಮ, ಬಯೋಟೆಕ್ನಾಲಜಿ, ಅಟೋಮೊಬೈಲ್ಸ್, ಮಾಹಿತಿ ತಂತ್ರಜ್ಞಾನ, ಮಿನರಲ್, ವಿದ್ಯುತ್, ಫುಡ್ ಪ್ರೋಸೆಸಿಂಗ್, ಜವಳಿ, ಆರೋಗ್ಯ, ಶಿಕ್ಷಣ ವಿಭಾಗಳಲ್ಲಿ ಬೇರೆ ಬೇರೆ ಶೇಷನ್ ಗಳನ್ನು ನಡೆಸಲು ನಿರ್ಧರಿಸಿದೆ.

ವಿಶ್ವ ಹೂಡಿಕೆದಾರರ ಸಮಾವೇಶಕ್ಕೆ ಸುಮಾರು 2000 ಕಂಪನಿ ಮತ್ತು ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ನೃತ್ಯಗಾರ್ತಿ ಮಾಯಾ ರಾವ್ ಮತ್ತು ತಂಡದವರೊಂದಿಗೆ ನೃತ್ಯ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ತಾಣಕ್ಕೆ ಭೇಟಿ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X