ಕೊಡಗಿನ ಕುಂಡೆ ಜನಾಂಗದ ವಿಶಿಷ್ಟ ಹಬ್ಬ

ಕುಂಡೇ..ಕುಂಡೇ... ಕುಂಡೆಗೆ ಲಕ್ಸ್ ಸೋಪು....ಕುಂಡೆಗೆ ವಿಐಪಿ ಕಾಚ... ಹೀಗೆ ಅಶ್ಲೀಲ ಪದಗಳನ್ನು ಹಾಡುತ್ತಾ... ಸಿಕ್ಕ ಸಿಕ್ಕವರಿಂದ ಹಣ ವಸೂಲು ಮಾಡುತ್ತಾ ದೇವರು ಸೇರಿದಂತೆ ಎದುರಿಗೆ ಸಿಕ್ಕಿದವರನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಂಠಪೂರ್ತಿ ಕುಡಿದು ಕುಪ್ಪಳಿಸಿ, ಬಳಿಕ ದೇವರ ಮುಂದೆ ತಾವು ಮಾಡಿದ್ದು ತಪ್ಪು ಕ್ಷಮಿಸಿ ಬಿಡು ಎಂದು ದೇವರಲ್ಲಿ ಕ್ಷಮೆ ಕೇಳುವುದರೊಂದಿಗೆ ಕೊಡಗಿನ ಗೋಣಿಕೊಪ್ಪ , ತಿತಿಮತಿ ಬಳಿಯ ದೇವರಪುರದಲ್ಲಿ ಬುಡಕಟ್ಟು ಜನರು ತಮ್ಮ ವಿಶಿಷ್ಟ ಹಬ್ಬವಾದ ಕುಂಡೆ ಹಬ್ಬವ ಸಂತಸ ಸಂಭ್ರಮದಿಂದ ಗುರುವಾರ ಆಚರಿಸಿದರು.
ಗ್ಯಾಲರಿ: ಕೊಡಗಿನ ವಿಶಿಷ್ಟ ಕುಂಡೆ ಹಬ್ಬದ ವೇಷಧಾರಿಗಳು
ಹರಕೆ ಹೊತ್ತ ವೇಷಧಾರಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ಗೋಣಿಕೊಪ್ಪ, ತಿತಿಮತಿಗೆ ಆಗಮಿಸಿ ಸಿಕ್ಕಸಿಕ್ಕವರಿಂದ ಹಣ ವಸೂಲಿ ಮಾಡತೊಡಗಿದರು. ಕೆಲವರು ಕೈಗೆ ಸಿಕ್ಕಿದ ಹಣದಲ್ಲಿ ಕಂಠಪೂರ್ತಿ ಕುಡಿದು ದಾರಿಯಲ್ಲಿಯೇ ಮಲಗಿದರೆ, ಇನ್ನು ಕೆಲವರು ತೂರಾಡುತ್ತಾ ಹೇಗೋ ದೇವರಪುರ ಬಳಿಯ ಅಯ್ಯಪ್ಪ ದೇಗುಲವನ್ನು ಸಂಜೆ ವೇಳೆಗೆ ತಲುಪಿದರು.
ಬಳಿಕ ದೇವರ ಮುಂದೆ ತಾವು ಮಾಡಿದ್ದು ತಪ್ಪಾಯಿತು ಎಂದು ಕ್ಷಮೆ ಕೇಳಿದರು. ಆ ನಂತರ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಮಹಾಪೂಜೆ ನೆರವೇರಿತು. ವಿಚಿತ್ರ, ವೇಷಗಳನ್ನು ಧರಿಸಿ ಆಗಮಿಸಿದ್ದ ಬುಡಕಟ್ಟು ಜನರು ಹಬ್ಬದ ಸವಿನೆನಪನ್ನು ಮೆಲುಕು ಹಾಕುತ್ತಾ ತಮ್ಮ, ತಮ್ಮ ಮನೆಯತ್ತ ಹೆಜ್ಜೆ ಹಾಕಿದರು.












Click it and Unblock the Notifications