ರೌಡಿ ಶೀಟರ್ ಪುಣೆ ರವಿ ಫಿನಿಷ್
ಬೆಂಗಳೂರು,
ಮೇ. 27 : ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಗರದ ಕುಖ್ಯಾತ ರೌಡಿ ಕ್ರಿಮಿ ಪುಣೆ ರವಿಯನ್ನು ಆರು ಜನರನ್ನು ಒಳಗೊಂಡ ಮುಸುಕುಧಾರಿಗಳ ತಂಡವೊಂದು ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ವತಂತ್ರ ಪಾಳ್ಯದಲ್ಲಿ ಭೀಕರವಾಗಿ ಹತ್ಯೆಗೈದು ಪರಾರಿಯಾದ ಘಟನೆ ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. id="toptextpromo">ಪುಣೆ
ರವಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್ ಗಳು ಪ್ರಕರಣ ದಾಖಲಾಗಿವೆ. ರವಿ ತನ್ನ ಪತ್ನಿಯ ತವರೂರು ಊಟಿಯಲ್ಲಿ ವಾಸಿಸುತ್ತಿದ್ದು. ಅಲ್ಲಿಂದಲೇ ಬೆಂಗಳೂರಿನ ಕೆಲ ಮರಿರೌಡಿಗಳ ಮೂಲಕ ಅನೇಕ ಕ್ರಿಮಿನಲ್ ದಂಧೆಗಳನ್ನು ನಡೆಸುತ್ತಿದ್ದ. ಪ್ರಕರಣವೊಂದರ ವಿಚಾರಣೆಗೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಅವರನ್ನು 6 ಜನರ ಮುಸುಕುಧಾರಿಗಳ ತಂಡವೊಂದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದೆ. id='are-slot-1' class='oiad oi-axt oiadv'> id='top-searched-articles'> ಪುಣೆ ರವಿಯ ಬಂಟ ರಾಮಚಂದ್ರ ಅಲಿಯಾಸ್ ಕಪ್ಪೆ ರಾಮ ಕೂಡ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಕಪ್ಪೆ ರಾಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications