ಪಾಕ್ ಪ್ರಧಾನಿಗೆ ಪ್ರೀತಿಯಿಂದ 'ಮಾವಿನಹಣ್ಣು'
ನವದೆಹಲಿ,
ಮೇ 27 : 'ಪ್ರೀತಿ ವಿಶ್ವಾಸಪೂರ್ವಕವಾಗಿ ಕಳುಹಿಸುತ್ತಿರುವ ಈ ಮಾವಿನಹಣ್ಣನ್ನು ಗಿಲಾನಿ ಇಷ್ಟ ಪಡಬಹುದು' ಎನ್ನುವ ಪತ್ರದ ಜೊತೆಗೆ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿಗೆ ಅಲ್ಫೋನ್ಸಾ ಮಾವಿನಹಣ್ಣನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ. id="toptextpromo">ಸುಮಾರು
20 ಕೆ.ಜಿ ಮಾವಿನಹಣ್ಣುಗಳನ್ನು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ರವಾನಿಸಲಾಗಿದೆ. ಅಲ್ಲಿಂದ ಇವುಗಳನ್ನು ಪಾಕ್ ಪ್ರಧಾನಿ ಕಚೇರಿಗೆ ತಲುಪಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಈ ಉಡುಗೊರೆಯನ್ನುಕಳುಹಿಸಿದ್ದರೆನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಇತ್ತಿಚೆಗೆ
ಥಿಂಪುವಿನಲ್ಲಿ ನಡೆದ ಶೃಂಗ ಸಭೆಯಲ್ಲಿ ಉಭಯ ನಾಯಕರು ಸ್ನೇಹಪರತೆ ಪ್ರದರ್ಶಿಸಿದ್ದರು. 1980ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕ್ ಅಧ್ಯಕ್ಷರಾಗಿದ್ದ ಜಿಯಾ-ಉಲ್-ಹಕ್ ಮಾವಿನಹಣ್ಣುಗಳನ್ನು ವಿನಿಮಯ ಮಾಡಿಕೊಂಡಿದ್ದರು. ಹಾಗೆಯೇ 2001ರಲ್ಲಿ ಪಾಕ್ ಸರ್ವಾಧಿಕಾರಿಯಾಗಿದ್ದ ಜನರಲ್ ಪರ್ವೇಜ್ ಮುಷರಫ್ ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಗೆ ಮಾವಿನಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದರು.











Click it and Unblock the Notifications