ಆಚಾರ್ಯ ಅವ್ರೀಗೆ ಮಂತ್ರಿ ಸೀಟು ಸಾಕಂತೆ
ಬೆಂಗಳೂರು,
ಮೇ. 27 : ತಮ್ಮ ಖಾತೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದರಿಂದ ಬೇಸತ್ತಿರುವ ಗೃಹ ಸಚಿವ ವಿ ಎಸ್ ಆಚಾರ್ಯ ರಾಜ್ಯಸಭೆಗೆ ಪ್ರವೇಶಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿರುವ ಸಂಗತಿ ಬಹಿರಂಗಗೊಂಡಿದೆ. id="toptextpromo">ರಾಜ್ಯಸಭೆಯ
ಎರಡು ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಅವಕಾಶವಿದೆ. ಒಂದು ಸ್ಥಾನಕ್ಕೆ ವೆಂಕಯ್ಯನಾಯ್ಡು ಆಯ್ಕೆಯಾಗುವುದು ನಿಶ್ಚಿತ. ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಬಿಜೆಪಿ ರಾಜ್ಯ ನಾಯಕರು ಬಿಟ್ಟುಕೊಟ್ಟಿಲ್ಲ. ತಮ್ಮ ಖಾತೆಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಯುತ್ತಿರುವುದರಿಂದ ಅವರು ತೀವ್ರ ಬೇಸರಗೊಂಡು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಕುರಿತು ಪಕ್ಷ ಚಿಂತನೆ ನಡೆಸಿರುವುದು ನಿಜ. ಹಿರಿಯರೊಬ್ಬರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬ ಚರ್ಚೆ ಬಂದಾಗ ಸಹಜವಾಗ ತಮ್ಮ ಹೆಸರು ಪ್ರಸ್ತಾಪಿಸಲಾಗಿದೆ ಎಂದು ಆಚಾರ್ಯ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಎರಡನೇ ಅಭ್ಯರ್ಥಿಯಾಗಿ ಉದ್ಯಮಿ ಎಂ ಪಿ ಕುಮಾರ್ ಅವರು ಸ್ಪರ್ಧಿಸುವ ಸಾಧ್ಯತೆಯೂ ಹೆಚ್ಚಾಗಿದೆ. ಸಂಘ ಪರಿವಾರದ ಒಡನಾಡಿ ಆಗಿರುವ ಕುಮಾರ್, ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ. ಮೇ 28 ರಂದು ಬಿಜೆಪಿ ಕೋರ್ ಕಮೀಟಿ ಸಭೆ ನಡೆಯಲಿದೆ.











Click it and Unblock the Notifications