12ಕೇಸ್ ಹಾಕಿ 12ಕೋಟಿ ಪರಿಹಾರ ನೀಡೆಂದ
ಬೆಂಗಳೂರು,
ಮೇ.26: ಗಲಭೆಗಾಗಿ ದುಡ್ಡು ಎಂಬ ತಲೆ ಬರಹದಡಿಯಲ್ಲಿ ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮಗಳು ಅತಿ ರಂಜಕವಾಗಿ ವರದಿ ಪ್ರಸಾರಿಸಿ ನನ್ನ ತೇಜೋವಧೆ ಮಾಡಿವೆ .ಹೀಗಾಗಿ ಮಾಧ್ಯಮ ಸಂಸ್ಥೆಗಳ ವಿರುದ್ಧ 12 ಕೋಟಿ ರು ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. id="toptextpromo">ಕೋಮುಗಲಭೆ
ಸೃಷ್ಟಿಗಾಗಿ ನಾನು ಯಾವುದೇ ಲಂಚ ಪಡೆದಿಲ್ಲ. ಹೆಡ್ ಲೈನ್ಸ್ ಟುಡೆ, ತೆಹಲ್ಕಾ ಹಾಗೂ ಅಜ್ ತಕ್ ವಾಹಿನಿಗಳು ಈ ಬಗ್ಗೆ ವಿಡಿಯೋ ಸಾಕ್ಷಿಯಿದೆ ಎಂದು ಹೇಳಿವೆ. ಸಾಕ್ಷಿ ಇದ್ದರೆ ಗೃಹ ಸಚಿವರಿಗೆ, ಪೊಲೀಸರಿಗೆ ಸಿಡಿ ನೀಡಲಿ ಆಗ ಸತ್ಯ ಗೊತ್ತಾಗುತ್ತದೆ. ಮಂಗಳೂರು ಪಬ್ ದಾಳಿ ಪ್ರಕರಣ ಹಾಗೂ ವ್ಯಾಲೆಂಟೈನ್ಸ್ ಡೇ ದಿನಾಚರಣೆ ಸಂದರ್ಭದ ಗಲಭೆ ದೃಶ್ಯಗಳುಳ್ಳ ಸಿಡಿಗಳನ್ನು ನೀಡಿ ನನ್ನನ್ನು ಗೂಂಡಾ ಎಂದು ಬಿಂಬಿಸಿದ್ದಾರೆ. ನನ್ನನ್ನು ಕೋರ್ಟ್ ಎಂದು ಅಪರಾಧಿ ಎಂದು ಗುರುತಿಸಿಲ್ಲ. ನನ್ನನ್ನು ಗೂಂಡಾ ಎನ್ನ್ನಲು ಇವರಿಗೇನು ಹಕ್ಕಿದೆ? ಎಂದು ಮುತಾಲಿಕ್ ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'>ಮುತಾಲಿಕ್
ಪರ ವಕೀಲ ದೊರೆರಾಜ್ ಮಾತನಾಡಿ, ಪ್ರಮೋದ್ ಮುತಾಲಿಕ್ ಅವರ ಮೇಲೆ 70 ಕೇಸುಗಳು ದಾಖಲಗಿವೆ. 52 ಕೇಸುಗಳಲ್ಲಿ ನಿರಪರಾಧಿ ಎಂದು ಸಾಬೀತಾಗಿದೆ. ಮಾಧ್ಯಮಗಳ ವಿರುದ್ಧ 12 ಕೇಸುಗಳನ್ನು ದಾಖಲಿಸಲಾಗಿದೆ. ಈಗಾಗಲೇ ಬೆಳಗಾವಿ, ಮಂಗಳೂರು, ಧಾರವಾಡ ಜಿಲ್ಲೆ ಮುಂತಾದೆಡೆ ಇದೇ ರೀತಿ ಕೇಸು ಹಾಕಲಾಗಿದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುತಾಲಿಕ್ ಮೊಕದ್ದಮೆ ಹೂಡಲಿದ್ದಾರೆ ಎಂದರು.











Click it and Unblock the Notifications