ರಾಹುಲ್ ಪರಾಕ್: ಪಿಎಂಗೆ ಬಿಜೆಪಿ ತರಾಟೆ

BJP spokesperson Ravishankar Prasad
ನವದೆಹಲಿ, ಮೇ.26: ರಾಹುಲ್ ಗಾಂಧಿ ಸಚಿವರಾಗಲು ಅರ್ಹರಾಗಿದ್ದಾರೆ ಎಂಬುದಾಗಿ ಪದೇ ಪದೇ ಹೇಳುತ್ತಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಟೀಕಿಸಿರುವ ಬಿಜೆಪಿ ರಾಹುಲ್ ರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಸೂಚಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು, ಪ್ರತಿ 3-4 ತಿಂಗಳಿಗೊಮ್ಮೆ ಪ್ರಧಾನಿ ಸಿಂಗ್ ರಾಹುಲ್ ಗಾಂಧಿ ಗುಣಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡುತ್ತಲೇ ಇರುತ್ತಾರೆ. ರಾಹುಲ್ ಅಷ್ಟೊಂದು ಗುಣಗಳ ಗಣಿಯೇ ಆಗಿದ್ದರೆ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಬಾರದೇಕೆ ಎಂದು
ಪ್ರಶ್ನಿಸಿದರು.

ಇದು ಕಾಂಗ್ರೆಸಿನ ಆಂತರಿಕ ವಿಷಯವಾಗಿದೆ. ಆದರೂ, ರಾಹುಲ್ ಸಂಪುಟವನ್ನು ಸೇರುವ ಮೂಲಕ ತನ್ನ ಆಡಳಿತಾತ್ಮಕ ಕೌಶಲ್ಯವನ್ನು ಪ್ರದರ್ಶಿಸಬಾರದೇಕೆ. ಸಂಪುಟಕ್ಕೆ ರಾಹುಲ್ ಅವರನ್ನು ಪ್ರಧಾನಿಯವರು ಸೇರಿಸಿಕೊಂಡದ್ದೇ ಆದರೆ ಅವರ ನೈಪುಣ್ಯವನ್ನು ದೇಶದ ಜನತೆ ನೋಡಬಹುದಾಗಿದೆ ಎಂದರು.

ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಹುದ್ದೆ ತೊರೆಯುವುದಿಲ್ಲ ಎಂದು ಹೇಳಿದ್ದ ಮನಮೋಹನ್ ಸಿಂಗ್, ಅದೇ ಉಸಿರಿನಲ್ಲಿ ರಾಹುಲ್ ಗಾಂಧಿ ಕೇಂದ್ರ ಸಂಪುಟದಲ್ಲಿ ಹುದ್ದೆ ಹೊಂದಲು ಅತ್ಯಂತ ಅರ್ಹರಾಗಿದ್ದಾರೆ ಎಂದು ಹೊಗಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+