ರೆಡ್ಡಿ ಪದೇ ಪದೇ ಕೋರ್ಟ್ ಗೆ ಚಕ್ಕರ್
ಬಳ್ಳಾರಿ,
ಮೇ.25: ಕರ್ನಾಟಕ - ಆಂಧ್ರದ ಗಡಿಕಲ್ಲುಗಳನ್ನು ಧ್ವಂಸ ಮಾಡಿದ್ದಲ್ಲದೇ ಗಣಿಯ ಗಡಿಗಳನ್ನು ಹಾಳು ಮಾಡಿದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತಿತರರ ಮೇಲಿನ ಆರೋಪಗಳ ಪ್ರಕರಣಗಳ ಕೈಬಿಡುವ ವಿಚಾರಣೆಯನ್ನು ಸಂಡೂರು ಜೆಎಂಎಫ್ಸಿ ನ್ಯಾಯಾಲಯ ಜೂನ್ 26ಕ್ಕೆ ಮುಂದೂಡಿದೆ. id="toptextpromo">ಸಚಿವರಾದ
ಜಿ.ಜನಾರ್ದನರೆಡ್ಡಿ, ಬಿ.ಶ್ರೀರಾಮುಲು, ಜಿ.ಕರುಣಾಕರರೆಡ್ಡಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ಕೈಬಿಡಲು ಸಚಿವ ಸಂಪುಟ ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಗಣಿ ಗುತ್ತಿಗೆದಾರ ಟಪಾಲ್ ನಾರಾಯಣರೆಡ್ಡಿ ಸಲ್ಲಿಸಿದ್ದ ಗಡಿ ಕಲ್ಲುಗಳ ಧ್ವಂಸ ಮತ್ತು ಗಣಿ ಗಡಿಗಳನ್ನು ಹಾಳು ಮಾಡಿರುವ ಪ್ರಕರಣವನ್ನು ಕೂಡ ಕೈಬಿಡಬೇಕು ಎಂದು ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಸರ್ಕಾರಿ
ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ ತಾವು ದಾಖಲಿಸಿರುವುದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಗಿರುವ ಕಾರಣ ಸದರಿ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರ ಟಪಾಲ್ ನಾರಾಯಣರೆಡ್ಡಿ ಅವರ ಪರ ವಕೀಲ ಗುಡೇಕೋಟೆ ನಾಗರಾಜ್ ವಾದಿಸಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಜನಾರ್ದನರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಪ್ರತೀ ಬಾರಿಯೂ (ಸುಮಾರು 4 ಬಾರಿ) ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.











Click it and Unblock the Notifications